ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಸಹಜ: ರಮೇಶ್ ಜಾರಕಿಹೊಳಿ

Public TV
2 Min Read
ramesh jarakiholi

– ಸಿಡಿ ಪ್ರಕರಣದ ಬಗ್ಗೆ ಮೌನ ಮುರಿದ ಜಾರಕಿಹೊಳಿ
– ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲ ತ್ಯಾಗಕ್ಕೂ ಸಿದ್ಧ

ಚಿಕ್ಕೋಡಿ(ಬೆಳಗಾವಿ): ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಇತಿಹಾಸದಲ್ಲಿದೆ. ನನ್ನ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ದೇವರು ನೋಡುತ್ತಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.

Ramesh Jarkiholi Mahesh Kumathalli

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೂರರ ವಿರುದ್ಧ ಷಡ್ಯಂತ್ರಗಳು ನಡೆಯುವುದು ಸಹಜ. ಇಂಥ ಷಡ್ಯಂತ್ರಗಳನ್ನು ಎದುರಿಸುತ್ತೇನೆ ಎಂದಿದ್ದಾರೆ. ಜೊತೆಗೆ ಸಿಡಿ ಪ್ರಕರಣ ಬಗೆಹರಿಸಲು ಸರ್ಕಾರ ಕಾಳಜಿ ತೋರುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ನನ್ನ ಸಿಡಿ ಪ್ರಕರಣ ಇತ್ಯರ್ಥ ಆಗಲು ಇನ್ನೂ ಒಂದು ವರ್ಷ ಆಗಲಿ, ನನಗೇನು ಆತುರವಿಲ್ಲ. ನಾನು ಮಂತ್ರಿ ಆಗಬೇಕೆಂದಿಲ್ಲ. ನನ್ನ ಸಹೋದರ ಇದ್ದಾನೆ, ಶಾಸಕ ಮಹೇಶ್ ಕುಮಟಳ್ಳಿ ಅವರಿದ್ದಾರೆ ಎಂದು ಪರೋಕ್ಷವಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಮಂತ್ರಿ ಸ್ಥಾನ ನೀಡಲಿ. ಮಂತ್ರಿ ಆಗಬೇಕು ಎಂಬ ಆಸೆ ನನಗೆ ಇಲ್ಲ ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

BALACHANDRA 4 medium

ಸಿಡಿ ಪ್ರಕರಣ ನ್ಯಾಯಾಲಯದಲ್ಲಿದೆ ಆ ಬಗ್ಗೆ ಮಾತನಾಡುವದಿಲ್ಲ. ಆರ್‍ಎಸ್‍ಎಸ್ ಹಾಗೂ ಬಿಜೆಪಿ ಪಕ್ಷ ನೀಡಿದ್ದಷ್ಟು ಪ್ರೀತಿ ಕಾಂಗ್ರೆಸ್ ನಲ್ಲಿ ನನಗೆ ಸಿಕ್ಕಿಲ್ಲ. ಸೂತ್ತೂರು ಮಠದ ಸಲಹೆ ಕೇಳಿ ಅವರ ಆದೇಶ ಪಾಲಿಸಿದ್ದೇನೆ. ನನಗೆ ಸಚಿವ ಸ್ಥಾನ ಸಿಗಲಿ ಬಿಡಲಿ ಸಮ್ಮಿಶ್ರ ಸರ್ಕಾರ ಬೀಳಿಸಿದ್ದಕ್ಕೆ ಈಗಲೂ ಸಂತೋಷವಿದೆ. ನಾನು ಮಂತ್ರಿ ಆಗುತ್ತೇನೋ ಇಲ್ಲೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ನಮ್ಮ ಸ್ನೇಹಿತ ಬೊಮ್ಮಾಯಿ ಆಗಿರುವುದು ಸಂತೋಷವಾಗಿದೆ ಎಂದು ನುಡಿದಿದ್ದಾರೆ.

BOMMAI 1

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಪೂರ್ಣ ಪ್ರಮಾಣ ಅಧಿಕಾರಕ್ಕೆ ಬರಬೇಕು. ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತ್ಯಾಗ ಮನೋಭಾವದಿಂದ ಕೆಲಸ ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲ ತ್ಯಾಗಕ್ಕೂ ಸಿದ್ಧ. ರಾಜಕಾರಣದಲ್ಲಿ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಕುಮಟಳ್ಳಿ ಅವರಿಗೆ ಮುಂದಿನ ದಿನ ಹೆಚ್ಚಿನ ಸ್ಥಾನ ಸಿಗಬಹದು. ನಾನು ನೀರಾವರಿ ಮಂತ್ರಿ ಆಗಿದ್ದು, ಮಹೇಶ್ ಕುಮಟಳ್ಳಿ ಅವರಿಂದ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

Share This Article
Leave a Comment

Leave a Reply

Your email address will not be published. Required fields are marked *