ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಘಾಟಿ ಸುಬ್ರಮಣ್ಯ ದೇವಾಲಯದ ಬಾಗಿಲು ಓಪನ್ ಮಾಡಲಾಗಿದೆ.
ವೀಕೆಂಡ್ ಹಾಗೂ ವಿಶೇಷ ಹಾಗೂ ರಜಾ ದಿನಗಳಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಶ್ರೀನಿವಾಸ್ ಆದೇಶ ಹೊರಡಿಸಿದ್ದರು. ನಾಗರ ಪಂಚಮಿಯಂದು ಭಕ್ತರು ಹೆಚ್ಚಿರ್ತಾರೆ ಎಂಬ ಕಾರಣಕ್ಕೆ ಘಾಟಿ ಸುಬ್ರಹ್ಮಣ್ಯಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಮಾಜಿ ಸಿಎಂ ಅವರಿಗೋಸ್ಕರ ದೇವಸ್ಥಾನವನ್ನು ಓಪನ್ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಯಡಿಯೂರಪ್ಪ ಬರ್ತಾರೆ ಎಂಬ ಕಾರಣಕ್ಕೆ ಉಳಿದ ಭಕ್ತರಿಗೂ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಈ ಮೂಲಕ ಯಡಿಯೂರಪ್ಪಗೆ ಮಾತ್ರ ಅವಕಾಶ ಎಂಬ ಆರೋಪ ತಪ್ಪಿಸಿಕೊಳ್ಳಲು ಯತ್ನ ಇದಾಗಿದೆ. ಒಟ್ಟಿನಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈಗೆ ಪುತ್ರ ವಿಜಯೇಂದ್ರ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಸಾಥ್ ನೀಡಿದರು. ಇದನ್ನೂ ಓದಿ: ಶಿರಾ ವಿಚಾರಕ್ಕೆ ಬಂದ್ರೆ ಹುಷಾರ್ – ಮಾಧುಸ್ವಾಮಿಗೆ ಟಿ.ಬಿ ಜಯಚಂದ್ರ ಖಡಕ್ ವಾರ್ನಿಂಗ್
ಎಲ್ಲರಿಗೂ ನಾಗಪಂಚಮಿಯ ಶುಭಕಾಮನೆಗಳು. ಇಂದು ಮಾಧವ ಸೃಷ್ಟಿ ವತಿಯಿಂದ ಘಾಟಿ ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾಗಿದ್ದ ’ಬೃಂದಾವನ’ ಸಸಿ ನೆಡುವ ಕಾರ್ಯಕ್ರಮದಲ್ಲಿ, ಆದರಣೀಯ ಸಹಸರಕಾರ್ಯವಾಹ ಶ್ರೀ ಮುಕುಂದ ಅವರೊಂದಿಗೆ ಭಾಗವಹಿಸಲಾಯಿತು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ರಾಷ್ಟ್ರೋತ್ಥಾನ ಗೋಶಾಲೆಗೆ ಭೇಟಿ ನೀಡಲಾಯಿತು pic.twitter.com/QDru9o5VNn
— B.S.Yediyurappa (@BSYBJP) August 13, 2021
ದೇವರ ದರ್ಶನ ಪಡೆದ ಬಳಿಕ ಸಿಎಂ ಅಲ್ಲಿಯೇ ಇದ್ದ ಗೋಶಾಲೆಗೆ ಭೇಟಿ ನೀಡಿದ್ದಾರೆ. ನಂತರ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.