ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ: ಈಶ್ವರಪ್ಪ

Public TV
1 Min Read
ESHWARAPPA 2 1

ಚಿಕ್ಕೋಡಿ: ಜೆಸಿಬಿಯಿಂದ ನರೇಗಾ ಕಾಮಗಾರಿ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ. ಸಿಇಒ ಕಡೆಯಿಂದ ವರದಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಜಲಪ್ರವಾಹದ ಕುರಿತು ರಿಪೋರ್ಟ್ ತರಸಿಕೊಳ್ಳುತ್ತಿದ್ದೇನೆ. ಆ ರಿಪೋರ್ಟ್ ಬಂದ ಕೂಡಲೇ ಪರಿಹಾರದ ಕುರಿತು ಸಿಎಂ ಜೊತೆಗೆ ಚರ್ಚೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

Anand Singh 1

ಆನಂದ್ ಸಿಂಗ್ ರಾಜೀನಾಮೆ ಕೊಡ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗ ಸಚಿವ ಸಂಪುಟ ಹೊಸದಾಗಿ ಆಗಿದೆ. ಈ ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್ ನಿಂದ ಬಂದವರು ಕಾರಣ ಅವರ ಋಣ ನಾವು ತಿರಿಸಬೇಕು. ಅವರು ಬರಲಿಲ್ಲ ಅಂದ್ರೇ ಈ ಸರ್ಕಾರ ಬರ್ತಿರಲಿಲ್ಲ. ಅಷ್ಟು ಜನರಿಗೆ ಮಂತ್ರಿ ಸ್ಥಾನ ಕೊಟ್ಟು ಉಳಿದಿದ್ರಲ್ಲಿ ನಾವು ಹಂಚಿಕೊಳ್ಳಬೇಕು. ಈ ಸಂದರ್ಭದಲ್ಲಿ ಒಬ್ರೂ ಇಬ್ರೂ ಸಮಸ್ಯೆ ಇದೆ ಅದನ್ನ ಮುಖ್ಯಮಂತ್ರಿ ಬಗೆ ಹರಿಸುತ್ತಾರೆ. ಇದ್ರಲ್ಲಿ ಆನಂದ್ ಸಿಂಗ್ ಅವರ ಸಮಸ್ಯೆ ಕೂಡ ಪರಿಹಾರ ಆಗುತ್ತೆ ಎಂದು ಹೇಳಿದರು.

KS ESHWARAPPA

ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಗ್ಪುರನಲ್ಲಿ ಟ್ರೈನಿಂಗ್ ಕೊಟ್ಟಿದ್ದಕ್ಕೆ ಆ ಪದ ನನ್ನ ಬಾಯಲ್ಲಿ ಬರಬಾರದಿತ್ತು ಅಂತಾ ಹೇಳಿದ್ದೇನೆ. ಆದ್ರೇ ಹರಿಪ್ರಸಾದ್ ನನಗೆ ಜೋಕರ್ ಅಂದ್ರೂ, ಪ್ರಧಾನಿ ಮೋದಿಗೆ ಸುಲಭ ಶೌಚಾಲಯಕ್ಕಿಡಬೇಕು ಅಂದ್ರೂ ಇದನ್ನ ಕಾಂಗ್ರೆಸ್‍ನವರು ಒಪ್ಪುವುದಾದ್ರೇ ಸರಿ. ಇಲ್ಲ ಅಂದ್ರೇ ಇಟಲಿ ಯೂನಿವರ್ಸಿಟಿಯಲ್ಲಿ ಅವರಿಗೆ ಕೊಟ್ಟ ಟ್ರೇನಿಂಗ್ ನಿಂದ ಕ್ಷಮೆ ಕೇಳಲ್ಲಾ ಅನ್ಕೊತ್ತೀನಿ. ಕಾಂಗ್ರೆಸ್‍ನವರು ಪ್ರತಿಭಟನೆ ಮಾಡಲಿ ಬಿಡಿ, ಬೇಡ ಅಂದವರು ಯಾರು? ಕೆಟ್ಟು ಕನಸು ಬೀಳ್ತಿರುವುದು ಸಿದ್ದರಾಮಯ್ಯನವರಿಗೆ, ನನಗೆ ಕನಸು ಬೀಳುತ್ತಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *