ಮೈಸೂರು: ನನ್ನ ಹಾಗೂ ಶಾಸಕ ಜಮೀರ್ ನಡುವೆ ಯಾವ ಮುನಿಸು, ಭಿನ್ನಾಭಿಪ್ರಾಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಟೀಕರಣ ಕೊಟ್ಟ ಅವರು, ಎಲ್ಲವೂ ಮಾಧ್ಯಮ ಸೃಷ್ಟಿ. ನನ್ನ ಮೇಲೆ ಜಮೀರ್ ಮುನಿಸಿ ಕೊಳ್ಳುವಂಥಹದು ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.
ಜಮೀರ್ ಜೊತೆಗಿನ ನನ್ನ ಸಂಬಂಧ ಚೆನ್ನಾಗಿದೆ. ಅವರು ಮನೆಗೆ ಬಂದು ಭೇಟಿಯಾಗದೇ ಇರುವುದಕ್ಕೆ ವಿಶೇಷ ಅರ್ಥ ಬೇಡ. ನಿನ್ನೆ ಕೆಪಿಸಿಸಿ ಅಧ್ಯಕ್ಷರು ಅವರ ಮನೆಗೆ ಹೋಗಿ ಮಾತಾಡಿದ್ದಾರೆ. ಇದಕ್ಕೆಲ್ಲಾ ಬೇರೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಹೆಳಿದರು. ಇದನ್ನೂ ಓದಿ: ಇ.ಡಿ ದಾಳಿಯಾಗುತ್ತಿದ್ದಂತೆ ಜಮೀರ್ ಕೈ ಬಿಟ್ರಾ ಸಿದ್ದರಾಮಯ್ಯ?
ಕಷ್ಟದ ಸಮಯದಲ್ಲಿ ನಂಬಿದ್ದ ಸಿದ್ದರಾಮಯ್ಯ ಕೈಬಿಟ್ಟರು. ಇ.ಡಿ ದಾಳಿ ಆಗ್ತಿದ್ದಂತೆಯೇ ಡಿಕೆಶಿ ನನ್ನ ನೆರವಿಗೆ ಬಂದರು. ನನ್ನ ನಾಯಕ ಅಂತ ನಂಬಿದ್ದ ಸಿದ್ದರಾಮಯ್ಯ ಒಂದೇ ಒಂದು ಮಾತಾಡ್ಲಿಲ್ಲ. ಇ.ಡಿ ದಾಳಿ ನೋವಲ್ಲಿ ಭೇಟಿಗೆ ಬರ್ತೇನೆ ಅಂದ್ರೂ ಸಿದ್ದರಾಮಯ್ಯ ಬೇಡ ಅಂದ್ರು. ನಾನು ನಂಬಿದ ನಾಯಕನೇ ಕಷ್ಟಕ್ಕೆ ಆಗಲಿಲ್ಲ. ಬೇರೆ ಏನಾಗಿದ್ರೂ ತಲೆ ಕೆಡಿಸಿಕೊಳ್ತಿರ್ಲಿಲ್ಲ, ಅವರು ಹೀಗೆ ಮಾಡಬಾರದಿತ್ತು. ನನ್ನ ಮನಸ್ಸೇ ಒಡೆದು ಹೋಯ್ತು, ಭಾರೀ ನೋವಾಗ್ತಿದೆ ಎಂದು ಜಮೀರ್ ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.