ಒಂದೇ ಚಾರ್ಜರ್ ಎರಡು ಮೊಬೈಲ್- ಚಾರ್ಜ್‍ಗಾಗಿ ಬಡಿದಾಟ, ಕೊಲೆ

Public TV
1 Min Read
rajajinagar

ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಯುವಕನ ಕೊಲೆ ಮಾಡಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುತ್ತಿದ್ದ ಅನಿಲ್ ನನ್ನು ಆಕಾಶ್ ಕೊಲೆ ಮಾಡಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ಯುವಕರ ಮಧ್ಯೆ ಈ ಗಲಾಟೆ ನಡೆದಿದೆ. ಮೃತ ಅನಿಲ್ ಹಾಗೂ ಅರೋಪಿ ಆಕಾಶ್ ಇಬ್ಬರೂ ಮಧ್ಯಪ್ರದೇಶದವರಾಗಿದ್ದು, ಇಬ್ಬರೂ ಮೊಬೈಲ್ ಚಾರ್ಜ್ ಹಾಕೋಕೆ ಒಂದೇ ಸ್ವಿಚ್ ಬಳಕೆ ಮಾಡುತ್ತಿದ್ದರು. ಈ ವೇಳೆ ಚಾರ್ಜ್ ಹಾಕುವ ಸಂಬಂಧ ಜಗಳ ಮಾಡಿಕೊಂಡಿದ್ದಾರೆ.

Police Jeep 1 2 medium

ಜಗಳ ವಿಕೋಪಕ್ಕೆ ತಿರುಗಿದ್ದು, ಆಕಾಶ್, ಅನಿಲ್ ನನ್ನು ಕೋಲಿನಿಂದ ಹೊಡೆದಿದ್ದಾನೆ. ಇಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಬಳಿಕ ಅನಿಲ್‍ಗೆ ಗಂಭೀರಗಾಯಗಳಾಗಿವೆ. ಆಸ್ಪತ್ರೆಗೆ ಕರೆದೊಯ್ಯುವಾಗ ಯುವಕ ಸಾವನಪ್ಪಿದ್ದಾನೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *