ಶಾಸಕಿ ಶಶಿಕಲಾ ಜೊಲ್ಲೆಯವರನ್ನು ಡಿಸಿಎಂ ಮಾಡಿ – ವಿಕಲಚೇತನರ ಒತ್ತಾಯ

Public TV
1 Min Read
CKD

ಚಿಕ್ಕೋಡಿ(ಬೆಳಗಾವಿ): ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿಕಲಚೇತನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ ತಹಶೀಲ್ದಾರ್ ಡಾ.ಡಿ ಎಚ್ ಹೂಗಾರ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದೆ.

Shashikala Jolle 5 medium

ಸೋಮವಾರ ತಾಲೂಕು ಪಂಚಾಯತ್ ಆವರಣದಲ್ಲಿ ಜಮಾವನೆಗೊಂಡು ಈ ಮೊದಲು ಯಡಿಯೂರಪ್ಪ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಿಸಿದ ಜೊಲ್ಲೆಯವರು ಅಂಗವಿಕಲರು ಮತ್ತು ಮಹಿಳೆಯರಿಗೆ ಸರಕಾರದ ಸಾಕಷ್ಟು ಯೋಜನೆ ಕಾರ್ಯರೂಪಕ್ಕೆ ತಂದು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ನೂತನ ಸಿ.ಎಂ ಬಸವರಾಜ ಬೊಮ್ಮಾಯಿ ಯವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿ ಮತ್ತೆ ಮೊದಲಿದ್ದ ಖಾತೆ ನೀಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಅವರನ್ನು ಸಂಪುಟದಲ್ಲಿ ಕಡೆಗಣಿಸಿದಲ್ಲಿ ಬರುವ ದಿನಗಳಲ್ಲಿ ರಾಜ್ಯದ ವಿವಿಧ ಭಾಗದಿಂದ ವಿಕಲಚೇತನರು ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಕ್ಕಳನ್ನು ಆಡಿಸುತ್ತಾ ಮನೆಯಲ್ಲಿರಲಿ: ಯತ್ನಾಳ್

881a006d fcee 462a a5c6 03de833d7820

ಈ ಸಂದರ್ಭದಲ್ಲಿ ತಾ.ಪಂ.ಇ.ಓ ಉಮೇಶ್ ಸಿದ್ನಾಳ, ಮಹಾವೀರ ಬಾಗಿ, ಚಿದಾನಂದ ಕಿಲ್ಲೆದಾರ ಹಾಗೂ ತಾಲೂಕಿನ ಅಂಗವಿಕಲರಾದ ಬಾಹುಬಲಿ ಬೆಳವಿ, ವಿಠ್ಠಲ ಕರಡಿ, ಮಲಗೌಡಾ ಪಾಟೀಲ, ಸಹದೇವ ನರಸನ್ನವರ, ಶಿವಲೀಲಾ ಹಿಡಕಲ್, ಕಲ್ಲಪ್ಪಾ ತಳವಾರ, ಸಂಜೀವ ಕರಿಗಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *