ರಾಯಚೂರು: ಜಿಲ್ಲೆಯ ಸಿಂಧನೂರು ನಗರದ ಚೆನ್ನಮ್ಮ ವೃತ್ತದ ಬಳಿಯ ಐತಿಹಾಸಿಕ ಆದಿಶೇಷ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನವಾಗಿದೆ. ದೇವಾಲಯದ ಕಬ್ಬಿಣದ ಗೇಟ್ ಬೀಗ ಮುರಿದು ಹುಂಡಿ ಹೊತ್ತೊಯ್ದಿದ್ದಾರೆ.
ಹುಂಡಿಯಲ್ಲಿ ಸುಮಾರು 2 ಲಕ್ಷ ರೂಪಾಯಿ ಸಂಗ್ರಹವಾಗಿತ್ತು ಎನ್ನಲಾಗಿದೆ. ದೇವಾಲಯದ ಮುಖ್ಯದ್ವಾರ ಭದ್ರವಾಗಿರುವುದರಿಂದ ಪಕ್ಕದ ಗೇಟ್ ಬೀಗ ಮುರಿದು ಕಳ್ಳರು ದೇವಾಲಯದ ಒಳಗೆ ಪ್ರವೇಶ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿ ಸುಮಾರಿಗೆ ಕಳ್ಳತನ ನಡೆದಿದೆ. ಇದನ್ನೂ ಓದಿ: ಇಂದು Friendship Day- ಗೆಳೆತನದ ಹಬ್ಬ ಆಚರಿಸೋದು ಏಕೆ?
ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಂತೆ ಭಕ್ತರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳದಿರುವುದಕ್ಕೆ ಕಳ್ಳತನ ನಡೆದಿರುವುದಾಗಿ ಭಕ್ತರು ಆರೋಪಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಂದೇ ವಾರದಲ್ಲಿ ಮೂರು ದೇವಾಲಯಗಳ ಕಳ್ಳತನವಾಗಿದ್ದು ಪ್ರತ್ಯೇಕ ಕಳ್ಳರ ಗ್ಯಾಂಗ್ ನ ಕೃತ್ಯವಿರಬಹುದು ಅಂತ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿದೆ.