ನಾನ್ಸೆನ್ಸ್ ಆರೋಪಕ್ಕೆ ತಲೆಕೆಡಿಸಿಕೊಳ್ಳಬೇಡಿ- ಕೋಟಾಗೆ ರಘುಪತಿ ಭಟ್ ಬೆಂಬಲ

Public TV
1 Min Read
RAGHUPATI BHAT

ಉಡುಪಿ: ಸಿಂಪಲ್ ಶ್ರೀನಿವಾಸ ಎಂದು ಖ್ಯಾತಿ ಪಡೆದಿರುವ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆರು ಕೋಟಿ ಮನೆ ಕಟ್ಟುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಇದೆಲ್ಲಾ ಕಾಮನ್, ಯು ಡೋಂಟ್ ವರಿ ಪೂಜಾರ್ರೆ ಎಂದಿದ್ದಾರೆ.

kota srinivas poojary

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಶಾಸಕ, ಮಂತ್ರಿಯಾದವರು ಮನೆ ಕಟ್ಟುವುದು ಅಪರಾಧವಲ್ಲ. ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಿದರೆ ಅದು ಅಪರಾಧ. ಆ ಫೋಟೋ ನೋಡುವಾಗಲೇ ಗೊತ್ತಾಗುತ್ತದೆ ಅದು ಸುಮಾರು 60 ಲಕ್ಷದ ಮನೆ. ಮನೆ ಕಂಪ್ಲೀಟ್ ಆಗುವಾಗ ಸುಮಾರು 80 ಲಕ್ಷ ರೂ. ಬೇಕಾಗಬಹುದು. ಮೂರು ಅವಧಿಗೆ ಕೋಟ ಶಾಸಕರಾಗಿ ಆಯ್ಕೆಯಾದವರು, ಶ್ರೀನಿವಾಸ ಪೂಜಾರಿ ಅವರಿಗೆ ಸಂಬಳ, ಹಲವಾರು ಭತ್ಯೆಗಳು ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೋಟ ಶ್ರೀನಿವಾಸ ಪೂಜಾರಿ ಸಚಿವ ಸ್ಥಾನ ತಪ್ಪಿಸಲು ಕುತಂತ್ರ

UDP KOTA KOTI MANE AV 3

ಕೋಟಾ 50 ಕೋಟಿ ಬಂಗಲೆ ಕಟ್ಟಲು ಹೊರಟಿಲ್ಲ
ಕೋಟಾ ಶ್ರೀನಿವಾಸ ಪೂಜಾರಿ ದೊಡ್ಡ ಬಂಗಲೆಯನ್ನು ಕಟ್ಟಿಸುತ್ತಿಲ್ಲ. ಬೇರೆ ನಾಯಕರ ತರಹ 50 ಕೋಟಿ ಮನೆ ಕಟ್ಟಲು ಹೊರಟಿಲ್ಲ ಎಂದು ಕೋಟಿ ಮನೆಯೊಡೆಯರಿಗೆ, ವಿರೋಧಿಗಳಿಗೆ ಕುಟುಕಿದರು. ತಮ್ಮ ಸ್ವಂತ ಜಮೀನಿನಲ್ಲಿ ಹಲವು ವರ್ಷದ ಹೋರಾಟ ಮಾಡಿ, ಕನಸಿನ ಮನೆ ಕಟ್ಟುತ್ತಿದ್ದಾರೆ. ಶ್ರೀನಿವಾಸ ಪೂಜಾರಿಯವರೇ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ರಾಜಕಾರಣದಲ್ಲಿ ಇಂತಹ ಅಪಪ್ರಚಾರ ಸಾಮಾನ್ಯ. ಇಂತಹದ್ದನ್ನೆಲ್ಲ ನಮ್ಮ ಜನ ನಂಬುವುದಿಲ್ಲ, ನಿಮ್ಮ ಮತದಾರರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

UDP KOTA KOTI MANE AV 4

ನೀವು ನಿಮ್ಮ ಕೆಲಸವನ್ನು ಮಾಡಿಕೊಂಡು ಹೋಗಿ. ಮಂತ್ರಿ ಮಂಡಲ ವಿಸ್ತರಣೆ ಆಗುತ್ತಿರುವಾಗ ಇಂತಹದ್ದೆಲ್ಲ ಸಾಮಾನ್ಯ. ಪೂಜಾರಿಯವರ ವಿರೋಧಿಗಳು, ಕಾಂಗ್ರೆಸ್ ಪಕ್ಷದವರು ಫೋಟೋ- ಬರಹ ಬಿಟ್ಟಿರಬಹುದು. ರಾಜಕೀಯಕ್ಕೆ ಬಂದ ಮೇಲೆ ಬೇಸರದ ನರ ಕಟ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಹಲವು ಏರುಪೇರುಗಳನ್ನು ನೋಡಿದ್ದೇನೆ. ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *