ಹಾಸನ: ಬೆಂಗಳೂರಿನ ಖಾಸಗಿ ಕಂಪನಿಯ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಪ್ರಮೋದ್ (23) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಗದಗ ಮೂಲದವನೆಂದು ಗುರುತಿಸಲಾಗಿದೆ. ರುಂಡ, ಮುಂಡ ಬೇರೆ ಬೇರೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಸಚಿವಾಕಾಂಕ್ಷಿ ರೇಣುಕಾಚಾರ್ಯಗೆ ಮತ್ತೆ ಸಿ.ಡಿ ಭಯ- ಕೋರ್ಟ್ ಮೊರೆ
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೊರೊನಾ ಹಿನ್ನೆಲೆಯಲ್ಲಿ ಊರಿನಲ್ಲಿಯೇ ಇದ್ದ. ಎರಡನೇ ಅಲೆ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಕಂಪನಿ ಕೆಲಸಕ್ಕೆ ಬೆಂಗಳೂರಿಗೆ ಹೋಗುವುದಾಗಿ ಮೂರು ದಿನದ ಹಿಂದೆ ಮನೆಯವರಿಗೆ ಹೇಳಿದ್ದನು. ಇಂದು ಬೆಳಗ್ಗಿನ ಜಾವ ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿಲ್ಪಾ ಶೆಟ್ಟಿಗೆ ತರಾಟೆಗೆ ತೆಗೆದುಕೊಂಡ ಕೊರ್ಟ್
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತಂದೆ ಅನಾರೋಗ್ಯಪೀಡಿತರಾಗಿದ್ದು, ದುಡಿದ ಸಂಬಳವನ್ನು ಮನೆಗೆ ಖರ್ಚು ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಕುಟುಂಬಸ್ಥರು ಈಗ ಸ್ವಗ್ರಾಮದಿಂದ ಹಾಸನಕ್ಕೆ ಬರುತ್ತಿದ್ದು ಬಳಿಕ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.
ಈ ಸಂಬಂಧ ಹಾಸನ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.