ವಲಸಿಗರ ರಾಜಕೀಯ ಭವಿಷ್ಯ ಸಮಾಧಿಯಾಗುತ್ತೆ: ಡಿಕೆಶಿ

Public TV
1 Min Read
hbl dk shivakumar

ಹುಬ್ಬಳ್ಳಿ: ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿ ಸಚಿವರಾದ ಶಾಸಕರ ರಾಜಕೀಯ ಭವಿಷ್ಯ ಸಮಾಧಿ ಆಗುತ್ತದೆ ಎಂದು ಈ ಹಿಂದೆ ಸದನದಲ್ಲಿ ಹೇಳಿದ್ದೆ. ಇದೀಗ ವಲಸಿಗ ಶಾಸಕರ ಪರಿಸ್ಥಿತಿ ಅದೇ ರೀತಿ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಮಾಧ್ಯಮವರ ಜೊತೆ ಮಾತನಾಡಿದ ಅವರು, ವಲಸಿಗ ಶಾಸಕರು ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಸಿಎಂ ಹಾಗೂ ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ, ಕಾಳಜಿ ಇಲ್ಲ. ಅವರು ಅರ್ಜೆಂಟ್ ನಲ್ಲಿ ಇದ್ದಾರೆ. ಅವರಿಗೆ ಪವರ್ ಬೇಕಾಗಿದೆ. ಆದರೆ ವಲಸಿಗ ಶಾಸಕರ ಪರಿಸ್ಥಿತಿ ನಾನು ಈ ಹಿಂದೆ ಹೇಳಿದಂತೆ ಆಗಲಿದೆ ಎಂದು ಡಿಕೆಶಿ ಭವಿಷ್ಯ ನುಡಿದರು.

Rebel MLAs B 1

ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಹಿಂದೆ 2019ರಲ್ಲಿ ಪ್ರವಾಹ ಆದಾಗಲೂ ಪರಿಹಾರ ನೀಡಿಲ್ಲ. ಈಗಲೂ ನೀಡ್ತಾರೆ ಅನ್ನೋ ನಂಬಿಕೆ ಇಲ್ಲ. ಅವರು ದೆಹಲಿಯಲ್ಲಿ ರೆಸ್ಟ್ ತಗೆದುಕೊಳ್ಳಲಿ. ಅವರಿಗೆ ಜನರು ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *