ಅಗಲಿದ ಅನೇಕ ಹಿರಿಯ ಕಲಾವಿದರ ಸಾಲಿಗೆ ಜಯಮ್ಮ ಸೇರಿಬಿಟ್ಟರು: ಜಗ್ಗೇಶ್

Public TV
1 Min Read
jaggesh 1

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ಕಲಾವಿದೆ ಜಯಂತಿ ಅವರ ನಿಧನ ಕುರಿತಾಗಿ ನಟ ಜಗ್ಗೇಶ್ ಅವರು ಹಳೆಯ ನೆನೆಪುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

jayanthi8

ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರಲ್ಲಿ ಭಾರತಿ ಅಮ್ಮ ಹಾಗು ಜಯಂತಿ ಅಮ್ಮ ಆಗಿದ್ದಾರೆ. ಭಾರತಿ ಅಮ್ಮನ ಜೊತೆ ನಟಿಸಲು ನನ್ನ ಅವಕಾಶ ಸಿಗಲಿಲ್ಲಾ, ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ ಸಮಾಧಾನ ಸಂತೋಷ ನನ್ನ ಕಲಾಬದುಕಿಗೆ ಇದೆ. ಅವರ ಜೊತೆ ಪಟೇಲ ಸಿನಿಮಾದಲ್ಲಿ ನಟಿಸುವಾಗ ಪಾಂಡುಪುರದ ಚಿಕ್ಕಾಡೆ ಗ್ರಾಮದಲ್ಲಿ ಶೂಟಿಂಗ್ ವಿರಾಮ ಸಿಕ್ಕು ಸಮಯಕಳೆವ ಅವಕಾಶಸಿಕ್ಕಿತ್ತು ಎಂದು ತಮ್ಮ ಹಿಂದಿನ ದಿನಗಳನ್ನು ನೆನೆದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೋಸವಾಗಿತ್ತು, ಹಸಿ ಹಸಿಯಾಗಿ ಬಲಿಯಾದರು: ಪತ್ರಕರ್ತ ಗಣಪತಿ

ನನ್ನ ಸಿನಿಮಪಯಣ ಅವರ ಜೊತೆ ಹಂಚಿಕೊಂಡ ಸಮಯ ಮರೆಯಲಾಗದ ಕ್ಷಣವಾಗಿದೆ. ಅವರಿಗೆ ನಾನು ರೇಗಿಸಿದ್ದು, ಜಯಮ್ಮ, ದೂರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ ಅಯ್ಯೋ ದೇವರೆ ಇಂದು ನಾಯಕನಟ ಆಗುವ ಬದಲು ದೂರದ ಬೆಟ್ಟದ ಸಮಯದಲ್ಲಿ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ ನಾಚಿ ನೀರಾಗಿದ್ದರು. ಹಾಗೂ ಕೋಲು ಹಿಡಿದು ಅಟ್ಟಾಡಿಸಿ ನಕ್ಕು ಆನಂದಿಸಿ you are my favorite actor ಎಂದು ಮುತ್ತಿಕ್ಕಿದ್ದರು. ಕೆಲವೊಮ್ಮೆ ನನ್ನ ಹಾಸ್ಯಕಂಡು ಮಗುವಂತೆ ನಗುತ್ತಿದ್ದರು. ಮನಸ್ಸು ಮಗುವಂತೆ ನಡೆದ ಸಂಗತಿ ಮೆಲುಕಾಕಿ ಆನಂದಿಸುತ್ತದೆ. ಇಂದು ಆ ಮಹಾನಟಿ ಇಲ್ಲಾ ಎಂದಾಗ ಮನಸ್ಸಿಗೆ ನೋವಾಯಿತು. ನಮ್ಮನ್ನು ಅಗಲಿದ ಅನೇಕ ಕಲಾವಿದರ ಸಾಲಿಗೆ ಜಯಮ್ಮ ಸೇರಿಬಿಟ್ಟರು. ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಲಿ loveyou ಅಮ್ಮ ಎಂದು ಬರೆದುಕೊಂಡು ಜಗ್ಗೇಶ್ ಅವರು ಅಕ್ಷರಗಳ ಮೂಲಕವಾಗಿ ತಮ್ಮ ನೋವನ್ನು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಯಂತಿ ಅವರುನ್ನು ಕಳೆದುಕೊಂಡ ಕನ್ನಡ ಸಿನಿಮಾ ತಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಹಲವು ಕಲಾವಿದರು, ಗಣ್ಯರು ಅವರನ್ನು ನೆನೆದು ಸಂತಾಪ ವ್ಯಕ್ತಪಡಿಸಿದ್ದಾರೆ.  ಜಗ್ಗೇಶ್ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *