ಲಕ್ನೋ: ಪತಿಯ ಜೊತೆ ಜಗಳವಾಡಿದ ಪತ್ನಿಯೊಬ್ಬಳು ಅದೇ ಸಿಟ್ಟಿನಿಂದ ತನ್ನ ನಾಲ್ವರು ಅಪ್ರಾಪ್ತೆಯರನ್ನು ಕೊಳಕ್ಕೆ ತಳ್ಳಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಗಿಲಬ್ಸಾ (8), ಅಫ್ರಿನಾ ಖತೂನ್ (5), ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2) ಮೃತರಾಗಿದ್ದಾರೆ. ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ದಂಪತಿ ನಡುವೆ ಜಗಳವಾಗಿದ್ದಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ತಾಯಿ ಕೊಳಕ್ಕೆ ನೂಕಿದ್ದಾಳೆ. ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಸವಾಲುಗಳನ್ನು ಎದುರಿಸಿದ್ದೇನೆ: ಬಿಎಸ್‍ವೈ ಅಳಲು
ನೂರ್ಜಹಾನ್ ನಿಸಾನ್ ತನ್ನ ನಾಲ್ಕು ಜನ ಹೆಣ್ಣು ಮಕ್ಕಳೊಂದಿಗೆ ಬಿಹಾರ ಗೋಪಾಲಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿರುತ್ತಾಳೆ. ಪತಿ ಅಸ್ಲಾಂ ಅಲಂ ಅಬ್ರಾಡ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ದೂರವಾಣಿ ಕರೆಯಲ್ಲಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಬಳಿಕವೇ ನಿಸಾನ್ ತಡ ಮಾಡದೇ ಬ್ಯಾಗ್‍ಪ್ಯಾಕ್ ಮಾಡಿಕೊಂಡು ತನ್ನ ಮೂಲ ನೆಲೆಯಾದ ಉತ್ತರಪ್ರದೇಶದ ಖುಷಿ ನಗರಕ್ಕೆ ಹೊರಟಿದ್ದಾರೆ. ಹೊರಡುವ ಮುನ್ನ ಮನೆಯ ಹತ್ತಿರದಲ್ಲಿದ್ದ ಕೊಳದಲ್ಲಿ ತನ್ನ ನಾಲ್ಕೂ ಹೆಣ್ಣು ಮಕ್ಕಳನ್ನು ನೂಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಒಂದು ಮಗುವಿನ ಜೀವ ಉಳಿದಿದ್ದು, ಮೂವರ ಶವವಾಗಿ ಪತ್ತೆಯಾಗಿದ್ದಾರೆ.
ನಾಲ್ವರಲ್ಲಿ ಒಬ್ಬಳಾದ ಅಫ್ರೀನಾಳನ್ನು ಸ್ಥಳೀಯರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಘಟನೆಯ ಬಳಿಕ ತಾಯಿ ನಿಸಾನ್‍ರನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.