ಬಿಗ್‍ಬಾಸ್ ಮನೆಯಲ್ಲಿ ಪ್ರತಿವಾರ ತಮ್ಮ ಲಕ್‍ನಿಂದ ಬಚಾವ್ ಆಗಿ ಬರುತ್ತಿದ್ದ ಶಮಂತ್ ಅವರಿಗೆ ಈ ವಾರ ಅವರ ಲಕ್ ಕೊಟ್ಟಿರುವಂತರಹ ಎಲ್ಲ ಲಕ್ಷಣಗಳಿವೆ. ಶಮಂತ್ ಈ ವಾರ ಮನೆಯಿಂದ ಆಚೆ ಹೋಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಇಬ್ಬರು ಹೊರ ಹೋಗುತ್ತಾರೆ ಎನ್ನುವ ಮಾತು ಕೇಳಿ ಬಂದಿದೆ. ಒಂದೊಮ್ಮೆ ಡಬಲ್ ಎಲಿಮಿನೇಷನ್ ಆದರೆ ಚಕ್ರವರ್ತಿ ಚಂದ್ರಚೂಡ್?, ಪ್ರಶಾಂತ್ ಸಂಬರಗಿ ಮತ್ತು ಶುಭಾ ಪೂಂಜಾ ಮೂವರಲ್ಲಿ ಇಬ್ಬರು ಔಟ್ ಆಗಲಿದ್ದಾರೆ ಎಂಬುದು ಫ್ಯಾನ್ಸ್ ಲೆಕ್ಕಾಚಾರವಾಗಿತ್ತು. ಆದರೆ ಈ ಲೆಕ್ಕಾಚಾರ ತಲೆಕೆಳಗೆ ಆದಂತೆ ಕಾಣುತ್ತಿದೆ.
View this post on Instagram
ಬಿಗ್‍ಬಾಸ್ ಪ್ರಸಾರವಾಗುವ ಖಾಸಗಿವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಾರದ ಎಪಿಸೋಡ್‍ಗೆ ರೆಡಿ ಆಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳು ನಿಂತಿರುವ ಫೋಟೋ ಇದಾಗಿದ್ದು, ಶಮಂತ್ ಮಿಸ್ ಆಗಿದ್ದಾರೆ. ನೆಟ್ಟಿಗರು ಶಮಂತ್ ಎಲ್ಲಿ ಎಂದು ಕಮೆಂಟ್ ಮಾಡಿ ಕೇಳಿತ್ತಿದ್ದಾರೆ. ಹೀಗಾಗಿ ಈ ವಾರಾ ಶಮಂತ್ ಮನೆಯಿಂದ ಆಚೆ ಬಂದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಶಮಂತ್ ಬ್ರೋ ಗೌಡ ಮೊದಲ ಇನ್ನಿಂಗ್ಸ್‍ನಲ್ಲಿ ಮನೆಯಲ್ಲಿ ಸತತ ಎರಡು ವಾರ ಕ್ಯಾಪ್ಟನ್ ಆದರು. ಇದಕ್ಕೆ ಮನೆಯವರ ಬೆಂಬಲ ಕೂಡ ಇತ್ತು. ನಂತರ, ಶಮಂತ್ ಗೋಸ್ಕರ ಬೆಡ್ ರೂಮ್ ಬಿಟ್ಟುಕೊಡೋ ಸಮಯ ಬಂದಾಗ ಎಲ್ಲರೂ ಇದನ್ನು ಬೆಂಬಲಿಸಿ, ಲಿವಿಂಗ್ ಏರಿಯಾದಲ್ಲಿ ಮಲಗಿದ್ದರು. ಇನ್ನು, ಅವರು ಬಿಗ್‍ಬಾಸ್‍ನಿಂದ ಎಲಿಮಿನೇಟ್ ಆಗಿದ್ದರು. ಆದರೆ, ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ ತಾವು ಬಿಗ್‍ಬಾಸ್ ಮನೆಯಿಂದ ಹೊರ ಹೋಗುತ್ತೇವೆ ಎಂದು ಶಮಂತ್ ಅವರನ್ನು ಸೇವ್ ಮಾಡಿದ್ದರು. ಇದಾದ ನಂತರದಲ್ಲಿ ಶಮಂತ್ ಲಕ್ಕಿ ಬಾಯ್ ಎಂದೇ ಕರೆಯಲ್ಪಟ್ಟಿದ್ದರು. ಅರ್ಧಕ್ಕೆ ನಿಂತಿದ್ದ ಬಿಗ್‍ಬಾಸ್ ಆರಂಭಕ್ಕೂ ಶಮಂತ್ ಅದೃಷ್ಟ ಕಾರಣ ಎಂದು ಟ್ರೋಲ್ ಪೇಜ್‍ಗಳು ಪೋಸ್ಟ್ ಮಾಡಿದ್ದವು. ಆದರೆ ಇದೀಗ ಅವರ ಲಕ್ ಕೈ ಕೊಟ್ಟಿರುವಂತೆ ಕಾಣುತ್ತಿದೆ.