ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಹಲವೆಡೆ ಮಳೆ ಹೊಡೆತಕ್ಕೆ ಮುಳುಗಡೆಯಾದ ಭೂಮಿಯೇ ಹೆಚ್ಚು. ಹೀಗಿರುವಾಗ ಮಳೆ ನಿರ್ವಹಣೆ, ಎಚ್ಚರಿಕೆ ಅಂತ ಪಾಲಿಕೆ ಪ್ರತಿ ವರ್ಷ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶ ಪಟ್ಟಿ ಮಾಡುತ್ತದೆ.
ಕಳೆದ 5 ವರ್ಷದಲ್ಲಿ ಪಟ್ಟಿಯಲ್ಲಿ ಹೆಸರಿಗೆ ಯಾವುದೇ ಮಳೆ ಹಾನಿ ಪ್ರದೇಶಗಳ ರಕ್ಷಣೆ ಮಾತ್ರ ಆಗಿಲ್ಲ. ಹಾಗೇ ನೋಡಿದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆ ಬಂದರೆ ಮುಳುಗಡೆ ಆಗೊದು ಬಹುತೇಕ ಖಚಿತ.
ಬೆಂಗಳೂರಿನಲ್ಲಿ ಮಳೆ ಬಂದ್ರೆ ಕಷ್ಟ. ಯಾವೆಲ್ಲ ಏರಿಯಾ ಮುಳುಗಡೆ ಭೀತಿ ಗೊತ್ತಾ..?. ಬಿಬಿಎಂಪಿ ಅಧಿಕಾರಿಗಳು ಎಷ್ಟೇ ಪ್ಲಾನ್ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಕೊರೊನಾ ಮಧ್ಯೆ ಬಿಬಿಎಂಪಿಗೆ ಹೊಸ ಸವಾಲ್ ಎದುರಾಗಿದೆ. ಮಳೆ ಅನಾಹುತಗಳನ್ನ ತಡೆಯಲು ಪಾಲಿಕೆಗೆ ಟೆನ್ಷನ್ ಶುರುವಾಗಿದೆ. ಇದನ್ನೂ ಓದಿ: ಬೃಹತ್ ಮರ ಕಡಿದು, ಹಗ್ಗ ಕಟ್ಟಿಕೊಂಡು ಮರದ ಮೇಲೆಯೇ 9 ಜನರ ರಕ್ಷಿಸಿದ ಪಿಎಸ್‍ಐ
ನಗರದಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳ ಪಟ್ಟಿ
* ಹೆಚ್ ಬಿ ಆರ್ ಲೇಔಟ್ ವೀರಣ್ಣ ಪಾಳ್ಯ, ನಂಡಾ ಗೋಕುಲ, ಎಂ ವಿ ಗಾರ್ಡನ್, ಮಾರ್ಫಿ ಮಾರ್ಕೆಟ್ , ಹಲಸೂರು ಜೋಗುಪಾಳ್ಯ, ಕಲ್ಯಾಣನಗರ, ಹೆಬ್ಬಾಳ ಪೂರ್ವ ಭಾಗದಲ್ಲಿದಲ್ಲಿರುವ ಸೂಕ್ಷ್ಮ ಪ್ರದೇಶಗಳು. ರಾಜಾಜಿನಗರ ವೆಸ್ಟ್ ಆಪ್ ಕಾರ್ಡ್ ರೋಡ್ , ರಾಜಾಜಿನಗರ ಇಂಡಸ್ಟ್ರಿಯಲ್ , ಬಿನ್ನಿ ಮಿಲ್ ರೋಡ್ ಹಾಗೂ ಕೆಪಿ ಅಗ್ರಹಾರ ಪಶ್ಚಿಮ ಭಾಗದಲ್ಲಿರುವ ಸೂಕ್ಷ್ಮ ಪ್ರದೇಶಗಳು.
* ದಕ್ಷಿಣ ಭಾಗದಲ್ಲಿ ಸೂಕ್ಷ್ಮ ಪ್ರದೇಶಗಳೆಂದರೆ, ಬಾಪೂಜಿನಗರ, ದತ್ತಾತ್ರೇಯ ಟೆಂಪಲ್ , ಹೊಸಕೆರೆಹಳ್ಳಿ, ಗಾಳಿ ಆಂಜನೇಯ ದೇವಾಸ್ಥಾನ, ಕೆಂಪಾಪುರ ಅಗ್ರಹಾರ, ನಾಯಂಡಹಳ್ಳಿ ಜಂಕ್ಷನ್, ಕವಿಕಾ ಬ್ರಿಡ್ಜ್, ನಾಯಂಡಹಳ್ಳಿ ಜಂಕ್ಷನ್ ಹಾಗೂ ಯಲಹಂಕ ಭಾಗದಲ್ಲಿ ಕರಿಯಣ್ಣ ಪಾಳ್ಯ, ರಾಚನಹಳ್ಳಿ ಕೆರೆ, ದೊಡ್ಡಬೊಮ್ಮಸಂದ್ರ, ತಿಂಡ್ಲು
* ಮಹಾದೇವಪುರದಲ್ಲಿ ಭಾಗದಲ್ಲಿ ವರ್ತೂರು, ಗುಂಜುರಿ, ಹೂಡಿ, ಸಜ್ಜಾಪುರ ರೋಡ್ ಹಾಗೂ ಬೊಮ್ಮನಹಳ್ಳಿ ಭಾಗದಲ್ಲಿ ಪೈ ಲೇಔಟ್, ಆರ್ ಆರ್ ಲೇಔಟ್ ಅಂಬೇಡ್ಕರ್ ನಗರ, ಆರ್ ಆರ್ ನಗರ ಭಾಗದಲ್ಲಿ ಹೆಚ್ ಎಸ್ ಆರ್ ಸೆಕ್ಟರ್, ಎನ್ ಎಸ್ ಪಾಳ್ಯ, ಗಾರಿಗೋವಿಪಾಳ್ಯ, ಹುಳಿಮಾವು. ದಾಸರಹಳ್ಳಿ ಭಾಗದಲ್ಲಿ ಸಿದ್ಧೇಶ್ವರ ಲೇಔಟ್, ಚಿಕ್ಕಸಂದ್ರ ವಿಘ್ನೇಶ್ವರ ಲೇಔಟ್ ಸೂಕ್ಷ್ಮ ಪ್ರದೇಶಗಳಾಗಿವೆ.