– ಯಾದಗಿರಿ, ಚಿಕ್ಕಮಗಳೂರಲ್ಲಿ ವರ್ಷಧಾರೆ
ಬೀದರ್: ರಾಜ್ಯದಲ್ಲಿ ಮಳೆ ಅವಾಂತರಗಳು ಮುಂದುವರಿದಿವೆ. ಸತತ ಮೂರು ಗಂಟೆಗಳಿಂದ ಸುರಿದ ಮಳೆಗೆ ಬೀದರ್‍ನಲ್ಲಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ.
ಹುಮ್ನಾಬಾದ್ ತಾಲೂಕಿನ ಕುಮಾರ್ ಚಿಂಚೋಳಿ ಗ್ರಾಮದ 34 ವರ್ಷದ ಪಾರಮ್ಮ ಸಾವನ್ನಪ್ಪಿದ ದುರ್ದೈವಿ. ಪತಿ ವೈಜನಾಥ್ ಹಾಗೂ ಇಬ್ಬರ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ತಾಲೂಕಿನ ಹೊನ್ನಾಳ ಚೆಕ್ ಪೋಸ್ಟ್ ಬಳಿ ಮಳೆಯಿಂದ ರಸ್ತೆ ಅರ್ಧಕರ್ಧ ಕೊಚ್ಚಿ ಹೋಗಿದೆ. ಮತ್ತೊಂದೆಡೆ ರಸ್ತೆ ಪಕ್ಕದ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಬಂದಿದ್ದು, ಮರಗಳು ಕೂಡ ರಸ್ತೆ ಮೇಲೆ ಬಿದ್ದಿವೆ.
ಯಾದಗಿರಿಯ ಯರಗೋಳ ಬಳಿ ಹಳ್ಳದ ನೀರಿಗೆ ಸೇತುವೆಯೊಂದು ಕೊಚ್ವಿಹೋಗಿದೆ. ದಾವಣಗೆರೆಯ ಚಿಕ್ಕಬಿದರಿ ಹಾಗೂ ಸಾರಥಿ ನಡುವಿನ ಸೇತುವೆ ಮುಳುಗಡೆ ಆಗಿದೆ. ಸಕಲೇಶಪುರ ತಾಲೂಕಿನ ಯಸಳೂರು ಮತ್ತು ಚಾವಳ್ಳಿಯಲ್ಲಿ ಹಲವು ಮನೆಗಳು ಹಾನಿಗೊಂಡಿವೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ನಕ್ಸಲರ ಗುಂಡಿಗೆ ಗದಗ ಯೋಧ ಹುತಾತ್ಮ
ಉತ್ತರ ಕನ್ನಡದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ತುಂಬಿದ ಕದ್ರಾ ಡ್ಯಾಂನಿಂದ ನೀರು ಹೊರಬಿಡಲಾಗ್ತಿದೆ. ರಾಜ್ಯದಲ್ಲಿ ಇನ್ನೂ ಐದು ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.