ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು

Public TV
1 Min Read
karwar fish2

– ಏನಿದು ಏಂಡಿ ಬಲೆ?

ಕಾರವಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಂದು ಕೂಡ ಮುಂದುವರಿದಿದೆ. ಮೀನುಗಾರರ ಸಾಂಪ್ರದಾಯಿಕ ಏಂಡಿ ಬಲೆಗೆ ರಾಶಿ, ರಾಶಿ ಮೀನು ಬಿದ್ದಿವೆ.

karwar fish9

ಕಾರವಾರ ಕಡಲ ತೀರಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಡಲಲ್ಲಿ ಮೀನುಗಾರಿಕೆ ಸಂಪೂರ್ಣ ನಿರ್ಬಂಧ ಇರುವುದರಿಂದ ಮೀನುಗಾರರು ಸಾಂಪ್ರದಾಯಿಕ ಏಂಡಿ ಬಲೆಯ ಮೀನುಗಾರಿಕೆ ಪ್ರಾರಂಭಿಸಿದ್ದಾರೆ. ಮಳೆಗಾಲದಲ್ಲಿ ಎರಡು ತಿಂಗಳು ಮೀನುಗಾರಿಕೆಗೆ ಸಂಪೂರ್ಣ ನಿಬರ್ಂಧ ಇರುತ್ತದೆ. ಹೀಗಾಗಿ ಮೀನು ಪ್ರಿಯರಿಗೆ ಒಣ ಮೀನು ಖರೀದಿ ಮಾಡಬೇಕು. ಒಣಮೀನಿನ ದರ ಸಹ ಅಧಿಕವಾಗಿರುವುದರಿಂದ ಮೀನು ತಿನ್ನುವ ಆಸೆ ಬಿಡಬೇಕಾಗುತ್ತದೆ.

karwar fish

ಏನಿದು ಏಂಡಿ ಬಲೆ?:
ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರೆ ತೀರ ಭಾಗದಲ್ಲೇ ಬಲೆಗಳನ್ನು ಬೀಸಿ ಮೀನು ಹಿಡಿಯಬಹುದು. ಇದಕ್ಕೆ ಏಂಡಿ ಬಲೆ ಮೀನುಗಾರಿಕೆ ಎಂದು ಕರೆಯುತ್ತಾರೆ. ಈ ಮೀನುಗಾರಿಕೆಯು ಮಳೆಗಾಲದಲ್ಲಿ ಆದಾಯವಿಲ್ಲದೇ ಖಾಲಿ ಉಳಿಯುವ ಮೀನುಗಾರರಿಗೆ ಲಾಭ ತರುವ ಸಂಪ್ರದಾಯಿಕ ಕೆಲಸವಾಗಿದೆ. ಇದನ್ನೂ ಓದಿ: ಚಿನ್ನದ ಬೋಟ್ ಸಾಗಾಟ – ಐವರ ಬಂಧನ
karwar fish23

ಮಳೆಯ ಅಬ್ಬರದ ನಡುವೆ ಕಾರವಾರ ಕಡಲ ತೀರದಲ್ಲಿ ಇಂದು ಏಂಡಿ ಬಲೆ ಮೀನುಗಾರಿಕೆ ಪ್ರಾರಂಭವಾಗಿದೆ. ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಭರ್ಜರಿ ಮೀನುಗಳ ಬೇಟೆಯಲ್ಲಿ ಮೀನುಗಾರರು ತೊಡಗಿದ್ದು, ಜನ ಮುಗಿಬಿದ್ದು ಖರೀದಿಯಲ್ಲಿ ನಿರತರಾಗಿದ್ದಾರೆ. ಪ್ರತಿ ಬುಟ್ಟಿಗೆ ಇಂದು ಸೋಮವಾರವಾದ್ದರಿಂದ 400 ದರ ನಿಗದಿ ಮಾಡಲಾಗಿದೆ. ಅನ್ಯ ದಿನದಲ್ಲಿ ದುಪ್ಪಟ್ಟು ದರ ಸಹ ಇರಲಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಡಲ ಭೋರ್ಗರೆತ ಮೀನುಗಾರರಿಗೆ ವರದಾನದಂತಾಗಿದ್ದು, ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ. ಇದನ್ನೂ ಓದಿ:  ತನ್ನನ್ನು ಕಾಪಾಡುವಂತೆ ಕನ್ನಂಬಾಡಿ ಕೂಗಿ ಹೇಳುತ್ತಿದೆ: ಸುಮಲತಾ

karwar fish5

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಇದರಿಂದಾಗಿ ಜೂನ್ ನಿಂದ ಜುಲೈ ಅಂತ್ಯದವರೆಗೂ ಮೀನುಗಳು ಮೊಟ್ಟೆ ಇಟ್ಟು ಮರಿಮಾಡುವ ಸಮಯವಾಗಿದ್ದು, ಕಡಲ ಅಬ್ಬರದ ವಾತಾವರಣ ಸಹ ಮೀನುಗಳಿಗೆ ಮರಿ ಮಾಡಲು ಪೂರಕವಾಗಿದೆ. ಹೀಗಾಗಿ ಈ ಬಾರಿ ಮೀನಿನ ಸಂಖ್ಯೆ ಸಹ ಏರಿಕೆಯಾಗುತಿದ್ದು, ಮೀನುಗಾರರಿಗೆ ಲಾಭದ ನಿರೀಕ್ಷೆ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *