ವಿಜಯನಗರ: ಹೊಟ್ಟೆಪಾಡಿಗೆ ಗೂಳೆ ಹೊರಟವರು ರಸ್ತೆ ಅಪಘಾತದಲ್ಲಿ ಸಾವನ್ನಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಇದನ್ನೂ ಓದಿ: ಕೊಚ್ಚೆಗೆ ಕಲ್ಲು ಹಾಕಲ್ಲ, ಮೆಂಟಲಿ ಡಿಸ್ಟರ್ಬ್ ಅದಾಗ ಟ್ರಿಟ್ಮೆಂಟ್ ತಗೊಳೋದು ಒಳ್ಳೆಯದು: ಇಂದ್ರಜಿತ್ ಲಂಕೇಶ್
ಪೀಕ್ಯಾ ನಾಯ್ಕ (50) ಶಂಕರ್ ನಾಯ್ಕ (30) ಮೃತ ದುರ್ಧೈವಿಗಳಾಗಿದ್ದಾರೆ. ಇವರು ಕೂಡ್ಲಿಗಿ ತಾಲೂಕಿನ ಗೋವಿಂದ ಗಿರಿತಾಂಡ ನಿವಾಸಿಗಳಾಗಿದ್ದಾರೆ. ಬೈಕಿಗೆ ಅಪರಿಚಿತವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪಿದ್ದಾರೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದ ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ಧಾರಿ 50ರಲ್ಲಿ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್
ಪೀಕ್ಯಾ, ಶಂಕರ್ ಇವರು ತಮ್ಮ ಗ್ರಾಮದಿಂದ ಮೈಸೂರು ಕಡೆಗೆ ಉದ್ಯೋಗ ಅರಸಿ ಗುಳೆ ಹೊರಟಿದ್ದರು. ತಮ್ಮ ಗ್ರಾಮದಿಂದ ಗುಳೇ ಹೊರಟಿದ್ದ ವಾಹನಗಳನ್ನು ಹಿಂಬಾಲಿಸಿಕೊಂಡು ಬೈಕ್‍ನಲ್ಲಿ ಚಲಿಸುತ್ತಿರುವಾಗ ಅಪರಿಚಿತ ವಾಹನ ಬೈಕ್‍ಗೆ ರಭಸವಾಗಿ ಡಿಕ್ಕಿಹೊಡೆದಿದೆ. ಬೈಕ್ ನಜ್ಜು ಗುಜ್ಜಾಗಿದ್ದು, ಬೈಕ್ ನಲ್ಲಿದ್ದ ಪೀಕ್ಯಾನಾಯ್ಕ ಸ್ಥಳದಲ್ಲಿಯೇ ಧಾರುಣವಾಗಿ ಸಾವನ್ನಪ್ಪಿದ್ದು, ಗಾಯಾಳು ಶಂಕರ್ ನಾಯ್ಕನನ್ನು ಬಳ್ಳಾರಿ ವಿಮ್ಸ್‌ಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮದ್ಯ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಜುಲೈ 18 ರಿಂದ 22ರವರೆಗೆ ಧಾರಾಕಾರ ಮಳೆ- ಹವಾಮಾನ ಇಲಾಖೆ