ನಾನು ದಲಿತ ಅಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು: ಗಂಗಾಧರ್

Public TV
1 Min Read
gangadhar

ಮೈಸೂರು: ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎಂದು ಸಂದೇಶ್ ಪ್ರಿನ್ಸ್ ಹೋಟೆಲಿನ ಸರ್ವಿಸ್ ಮ್ಯಾನೇಜರ್ ಗಂಗಾಧರ್ ಪೊಲೀಸರ ಮುಂದೆ ಹೇಳಿದ್ದಾರೆ.

Mysuru police2 medium

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪ ಸಂಬಂಧ ಇಂದು ಪೊಲೀಸರು ಹೋಟೆಲಿಗೆ ತೆರಳಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗಂಗಾಧರ್ ಕೂಡ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

INDRAJITH 1 medium

ಈ ವೇಳೆ ತಾನು ದಲಿತ ಸಮುದಾಯದವನಲ್ಲ, ಬ್ರಾಹ್ಮಣ ಸಮುದಾಯದವನು ಎಂದು ಪೊಲೀಸರ ಮುಂದೆ ಗಂಗಾಧರ್ ಹೇಳಿದ್ದಾರೆ. ಸಿಸಿಟಿವಿ ಪರಿಶೀಲನೆಯ ಬಳಿಕ ಗಂಗಾಧರ್ ಹೇಳಿಕೆ ಮುಕ್ತಾಯವಾದ ಬಳಿಕ ಪೊಲೀಸರು ಬಿಹಾರ ಮೂಲದ ಟ್ರೈನಿ ಸಮೀರ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದ್ರಜಿತ್ ಜೊತೆಗಿನ ಫೋಟೋ ವೈರಲ್ – ನನ್ನ ಹೆಸರು ತಳುಕು ಹಾಕೋ ಕೆಲಸ ಮಾಡ್ಬೇಡಿ ಅಂದ್ರು ಹೆಚ್‍ಡಿಕೆ

Mysuru police medium

ನಿನ್ನೆ ಏಕಾಏಕಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿರುವ ಇಂದ್ರಜಿತ್, ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಇಂದ್ರಜಿತ್, ಹೋಟೆಲ್ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಗೋಪಾಲ್ ರಾಜ್ ಎಂಬಾತನ ಕಣ್ಣು ಹೋಗಿದೆ. ಅಲ್ಲದೆ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಸ್ಟಾರ್ ನಟನ ಮಗಳು

ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದ ಬೆನ್ನಲ್ಲೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಗೋಪಾಲ್ ರಾಜ್, ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ. ನಾನು ಕೋಮಾದಲ್ಲಿಯೂ ಇಲ್ಲ. ನಿರ್ಮಾಪಕರಾದ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *