ಯಾದಗಿರಿ: ನಿಮಗೆ ಲಕ್ಕಿಡಿಪ್ ನಲ್ಲಿ ಕಾರ್, ಬೈಕ್ ಸಿಗುತ್ತದೆ ಎಂದು ಹಳ್ಳಿಗರನ್ನು ನಂಬಿಸಿದ ಖದೀಮರ ತಂಡವೊಂದು ಅವರಿಂದ ಹಣ ಪಡೆದು ಬಳಿಕ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಲಕ್ಷ್ಮಿ ನಗರದಲ್ಲಿ ವರದಿಯಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಕೆ.ಎಸ್.ಎಸ್ ಎಂಟರ್ಪ್ರೈಸಸ್ ಹೆಸರಿನಲ್ಲಿ ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಖದೀಮರು ಕಂಪನಿ ಆರಂಭಿಸಿದರು. ಬಳಿಕ ಲಕ್ಕಿಡಿಪ್ ಸ್ಕೀಮ್ ಮಾಡಿ ಕಾರ್,ಬೈಕ್, ಚಿನ್ನಾಭರಣ ಮೊದಲಾದ ಗೃಹ ಬಳಕೆ ವಸ್ತುಗಳನ್ನು ಬಂಪರ್ ಲಕ್ಕಿ ಸ್ಕೀಮ್ ನಲ್ಲಿ ಲಾಟರಿ ಮೂಲಕ ನೀಡುತ್ತೇವೆ ಎಂದು ಸ್ಥಳೀಯರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡಿದ್ದರು. ಇದನ್ನೂ ಓದಿ: ಮನೆ ಕನ್‍ಸ್ಟ್ರಕ್ಷನ್ ಉಸ್ತುವಾರಿಗೆ ಬಂದವ ಸ್ನೇಹಿತನ ಪತ್ನಿಯ ಜೊತೆ ಪರಾರಿ
ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದವರನ್ನು ಟಾರ್ಗೆಟ್ ಮಾಡಿದ ಈ ವಂಚಕರು ಯಾದಗಿರಿ ನಗರ ಸೇರಿದಂತೆ ಯರಗೋಳ, ಬಂದಳ್ಳಿ, ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹಳ್ಳಿಯ 2000ಕ್ಕೂ ಅಧಿಕ ಜನರಿಂದ 8 ಕಂತುಗಳಲ್ಲಿ ಪ್ರತಿ ಕಂತು 399 ರೂ. ವಸೂಲಿ ಮಾಡಿ, ಪ್ರತಿಯೊಬ್ಬರಿಂದಲ್ಲೂ 3000 ರೂಗಳಂತೆ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಹಾಕಿಕೊಂಡು ಜಾಗಖಾಲಿ ಮಾಡಿದ್ದಾರೆ. ಸ್ಕೀಮ್ ಮೋಸದಿಂದ ತಡವಾಗಿ ಎಚ್ಚರಗೊಂಡ ಜನ ನ್ಯಾಯಕ್ಕಾಗಿ ಎಸ್‍ಪಿ ಕಚೇರಿ ಕದ ತಟ್ಟಿದ್ದಾರೆ.