ಬಳ್ಳಾರಿ: ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೆ ನವಜಾತ ಶಿಶುವನ್ನು ದೇವಸ್ಥಾನದ ಬಳಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ನಡೆದಿದೆ.
ಬಂಡ್ರಾಳು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಶಿಶುವನ್ನು ಬಿಟ್ಟು ಹೋಗಿದ್ದಾರೆ. ನವಜಾತ ಶಿಶು ಹೆಣ್ಣು ಮಗು ಆದ ಕಾರಣ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳೀಯರು ದೇವಸ್ಥಾನಕ್ಕೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದ್ದು, ವಿಷಯ ತಿಳಿದು ಸ್ಥಳಕ್ಕೆ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಜಲಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಡ್ಯ ಗಣಿ ಅಖಾಡಕ್ಕೆ ಧುಮುಕುತ್ತಾ ಕಾಂಗ್ರೆಸ್? – ಸಿದ್ದರಾಮಯ್ಯಗೆ ಸಿಕ್ತು ಪ್ರಬಲ ರಾಜಕೀಯ ಅಸ್ತ್ರ
ಗರ್ಭಾವಸ್ಥೆ ಪೂರ್ಣವಾಗದೆ ಅಕಾಲಿಕವಾಗಿ ಮಗು ಜನಿದ್ದು, ಮಗುವಿನ ತೂಕ ಕಡಿಮೆ ಇದೆ. ಈ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಮಗುವನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಪೋಷಣೆ ಮಾಡಲಾಗುತ್ತಿದೆ.