ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಪುತ್ರ ಜ್ಯೂನಿಯರ್ ಚಿರುಗೆ ಸದ್ಯ 8 ತಿಂಗಳು ತುಂಬಿದೆ. ಈ ಮಧ್ಯೆ ಜ್ಯೂನಿಯರ್ ಚಿರುವಿನ ಎಂದೂ ಕಾಣದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೇಘನಾ ರಾಜ್‍ರವರ ತಮ್ಮ ಪ್ರೀತಿಯ ಪುತ್ರನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಮೇಘನಾ ರಾಜ್‍ರವರು ತಮ್ಮ ಸ್ನೇಹಿತೆಯನ್ನು ಭೇಟಿ ಮಾಡಿದ್ದು, ಈ ವೇಳೆ ಜ್ಯೂನಿಯರ್ ಜೊತೆಗೆ ಮೇಘನಾ ರಾಜ್‍ರ ಸ್ನೇಹಿತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
View this post on Instagram
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೋದಲ್ಲಿ ಜ್ಯೂನಿಯರ್ ಚಿರುವನ್ನು ಮೇಘನಾರವರ ಸ್ನೇಹಿತರು ಎತ್ತಿಕೊಂಡಿರುವುದನ್ನು ನೋಡ ಬಹುದಾಗಿದೆ. ಜೊತೆಗೆ ಈ ವೇಳೆ ಆಟ ಆಡಿಸಲು ಬಂದ ಸಣ್ಣ ಬಾಲಕನನ್ನು ಕಂಡು ಜ್ಯೂನಿಯರ್ ಅಳುತ್ತಿರುವಂತೆ ಕಾಣಿಸುತ್ತದೆ.
View this post on Instagram
ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದರು. ಕೊರೊನಾದಿಂದ ಭೇಟಿ ನೀಡಲು ಸಾಧ್ಯವಾಗದ ಕಾರಣ ಹನುಮಾನ್ ದೇವಾಲಯವನ್ನು ವೀಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಇದನ್ನೂ ಓದಿ:ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!