ಶೌಚಾಲಯದಲ್ಲಿ ನವಜಾತ ಶಿಶು ಶವ – ಹೆತ್ತ ಅಮ್ಮನಿಂದಲೇ ಮರ್ಡರ್

Public TV
1 Min Read
CKB Murder 1

– ಮಗುವನ್ನು ಕಂದು ಪತಿ ಜೊತೆ ಎಸ್ಕೇಪ್

ಚಿಕ್ಕಬಳ್ಳಾಪುರ : ಜುಲೈ 03 ರಂದು ಜಿಲ್ಲೆಯ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶು ಕೊಲೆ ಪ್ರಕರಣ ಸಂಬಂಧ ಚಿಂತಾಮಣಿ ನಗರ ಠಾಣೆ ಪೊಲೀಸರು ಪೋಷಕರನ್ನ ಬಂಧಿಸಿದ್ದಾರೆ.

CKB Murder 3 medium

ಚೇಳೂರು ತಾಲೂಕು ಚಾಕವೇಲು ಗ್ರಾಮದ ಮಮತಾ ಹಾಗೂ ವೇಣುಗೋಪಾಲರೆಡ್ಡಿ ಬಂಧಿತರು. ಹೆತ್ತ ಮಗುವನ್ನ ಕೊಲೆ ಮಾಡಿರೋದಾಗಿ ತಾಯಿ ಮಮತಾ ತಪ್ಪೊಪ್ಪಿಕೊಂಡಿದ್ದಾಳೆ. ಆಸಲಿಗೆ ಮಮತಾ ತಾನು ಗರ್ಭಿಣಿ ಆಗಿರುವ ವಿಚಾರವನ್ನೇ ಮನೆಯಲ್ಲಿ ತಿಳಿಸಿರಲಿಲ್ಲ. ಗಂಡನಿಗೂ ಸಹ ಇತ್ತೀಚೆಗೆ ತಿಳಿಸಿದ್ದಳು. ಜುಲೈ 03 ರಂದು ಶನಿವಾರ ಚಿಂತಾಮಣಿಗೆ ಅಕ್ಕನ ಮನೆಗೆ ಅಂತ ಖಾಸಗಿ ಬಸ್ ನಲ್ಲಿ ಗಂಡ ಹೆಂಡತಿ ಇಬ್ಬರು ಬರುವಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಗಂಡ-ಹೆಂಡತಿ ಇಬ್ಬರು ಬಂದಿದ್ದಾರೆ.

CKB Murder 4 medium

ಈ ಸಮಯದಲ್ಲಿ ಶೌಚಾಲಯಕ್ಕೆ ಅಂತ ಹೋದ ಮಮತಾಳಿಗೆ ಅಲ್ಲೇ ಹೆರಿಗೆಯಾಗಿದೆ. ಆದರೆ ಆಕೆಗೆ ಆದೇನಾಯ್ತೋ? ಏನೋ? ಕೊಲೆ ಮಾಡಿದ್ದಳು. ಹೊರಗೆ ಬಂದು ಗಂಡನಿಗೆ ವಿಷಯ ತಿಳಿಸಿ ಅಲ್ಲಿಂದ ಇಬ್ಬರು ಎಸ್ಕೇಪ್ ಆಗಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಕೊಲೆಗಾತಿ ತಾಯಿ ಮಮತಾ ಸಹಕಾರ ನೀಡಿದ ಗಂಡ ವೇಣುಗೋಪಾಲರೆಡ್ಡಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ – ಕೂದಲೆಳೆ ಅಂತರದಲ್ಲಿ ಮಹಿಳೆ ಬಚಾವ್!

CKB Murder 2 medium

ತನಿಖೆ ಮುಂದುವರೆದಿದ್ದು ತಾಯಿ ಮಮತಾಳ ಬಳಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಅಂತ ಎಸ್‍ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಈ ದಂಪತಿಗೆ ಈಗಾಗಲೇ 6 ವರ್ಷದ ಗಂಡು ಮಗು ಸಹ ಇದೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದ ಗಂಡ ಹೆಂಡತಿ ಕೊರೊನಾ ಲಾಕ್‍ಡೌನ್ ನಂತರ ಸ್ವಗ್ರಾಮ ಚಾಕುವೇಲುಗೆ ಆಗಮಿಸಿ ಇಲ್ಲೇ ಇದ್ರು. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ

Share This Article
Leave a Comment

Leave a Reply

Your email address will not be published. Required fields are marked *