ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್‍ರವರು ಲಖನೌನ ಸಂಜಯ್ ಗಾಂಧಿ ವೈದ್ಯಕೀಯ ಹಾಗೂ ವಿಜ್ಞಾನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾಗುವ ವೇಳೆ ಅವರ ರಕ್ತದ ಒತ್ತಡ ಹಾಗೂ ಹಾರ್ಟ್ ಬಿಟ್ ನಾರ್ಮಲ್ ಆಗಿದ್ದರೂ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಅವರು ಈ ಹಿಂದೆ ಹೊಂದಿದ್ದ ಕಾಯಿಲೆಗಳನ್ನು ಗಮನದಲಿಟ್ಟುಕೊಂಡು ಸಿಸಿಎಂನ ಐಸಿಯುವಿಗೆ ದಾಖಲಿಸಲಾಗಿದೆ.
ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿರುವ ಕಲ್ಯಾಣ್ ಸಿಂಗ್‍ರವರಿಗೆ ಚಿಕಿತ್ಸೆ ನೀಡಲು ನೆಫ್ರಾಲಜಿ, ಕಾರ್ಡಿಯಾಲಜಿ, ಎಂಡೋಕ್ರೈನಾಲಜಿ ಮತ್ತು ನ್ಯೂರೋ-ಓಟಾಲಜಿ ವಿಭಾಗಗಳಿಂದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಕಳೆದ ಎರಡು ವಾರಗಳಿಂದ ಕಲ್ಯಾಣ್ ಸಿಂಗ್‍ರವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
आज लखनऊ स्थित डॉ.राम मनोहर लोहिया आयुर्विज्ञान संस्थान पहुंचकर राजस्थान के पूर्व राज्यपाल एवं उ.प्र. के पूर्व CM श्री कल्याण सिंह जी के स्वास्थ्य के बारे में जानकारी प्राप्त की व डॉक्टरों को देखभाल हेतु निर्देशित किया।
प्रभु श्री राम से प्रार्थना है कि आपको शीघ्र स्वस्थ करें। pic.twitter.com/VLjEQVey0G
— Yogi Adityanath (@myogiadityanath) July 4, 2021
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್‍ರವರು ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣ್ ಸಿಂಗ್‍ರವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ:ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ