ಕೊಪ್ಪಳ: ಇಲ್ಲಿಯವರೆಗೂ ದಲಿತರು ಮುಖ್ಯಮಂತ್ರಿ ಆಗಿಲ್ಲ. ದಲಿತರು ಸಿಎಂ ಆಗಬೇಕೆಂದು ಕೇಳುವದರಲ್ಲಿ ತಪ್ಪಿಲ್ಲ. ಒಂದು ಸಮಯ ಮತ್ತು ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ತಮ್ಮ ಕನಸನ್ನು ಹೊರ ಹಾಕಿದ್ದಾರೆ.
ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಶಾಸಕರು ವಾಪಸ್ಸು ಬಂದ್ರೆ ಪರಿಶೀಲಿಸಿ ಕರೆದುಕೊಳ್ಳಬೇಕು. ಆದ್ರೆ ಇದುವರೆಗೂ ಯಾರೂ ಅರ್ಜಿ ಹಾಕಿಲ್ಲ. ಅರ್ಜಿ ಹಾಕಿದಾಗ ನಾನೇ ನಿಮಗೆ ತಿಳಿಸುತ್ತೇನೆ. ಯೋಗ್ಯರನ್ನು ಖಂಡಿತವಾಗಿ ಕರೆದುಕೊಳ್ಳುತ್ತೇವೆ. ಕೆಲವರು ಯಾರದ್ದೋ ಮಾತನ್ನು ಕೇಳಿ ಹೋಗಿರುತ್ತಾರೆ ಎಂದು ಹೇಳಿದರು.
ಪಕ್ಷದಲ್ಲಿ ಅಭಿಪ್ರಾಯ ಹೇಳಲು ಅವಕಾಶಗಳಿವೆ. ಅಭಿಪ್ರಾಯಗಳಿದ್ದಲ್ಲಿ ಭಿನ್ನಾಭಿಪ್ರಾಯ ಇರೋದು ಸಹಜ. ಮುಂದಿನ ಸಿಎಂ ಯಾರು ಎಂಬುದರ ಬಗ್ಗೆ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಹಾಗಾಗಿ ಯಾರು? ಏನು? ಎಂಬುದರ ಬಗ್ಗೆ ಮಾತನಾಡಲು ಆಗಲ್ಲ. ನನಗೂ ಸಚಿವ ಮತ್ತು ಸಿಎಂ ಆಗಬೇಕೆಂಬ ಆಸೆ ಇದೆ. ಆದ್ರೆ ಇಲ್ಲಿಯವರೆಗೂ ಅವಕಾಶ ಸಿಕ್ಕಿಲ್ಲ ಎಂದರು. ಇದನ್ನೂ ಓದಿ: ಪ್ರಳಯವಾದರೂ ಆ 14 ಮಂದಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದು ನಿಜ: ಸಿದ್ದರಾಮಯ್ಯ