ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಸಹೋದರರ ಮನೆಗೆ ಡಿಸಿಎಂ ಭೇಟಿ

Public TV
2 Min Read
Mahesh Kumathalli1

– ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ ಪರಿಹಾರ ವಿತರಣೆ

ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ನಾಲ್ವರು ಸಹೋದರರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ, ಡಿಸಿಎಂ ಲಕ್ಷ್ಮಣ ಸವದಿ ಮತ್ತು ಅಥಣಿ ಶಾಸಕ ಮಹೇಶ ಕುಮಟಳ್ಳಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬನಸೋಡೆ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: 34ನೇ ವಸಂತಕ್ಕೆ ಕಾಲಿಟ್ಟ ಡೈನಾಮಿಕ್ ಪ್ರಿನ್ಸ್ – ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್

Mahesh Kumathalli2 medium

ಮೃತಪಟ್ಟ ಸಹೋದರರ ತಂದೆ ಗೋಪಾಲ್‍ಗೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ನೀಡಿ, ಮಾತನಾಡಿದ ಅವರು, ಪುತ್ರ ಶೋಕದಲ್ಲಿರುವ ವಯೋವೃದ್ದ ತಂದೆ-ತಾಯಿಯ ದುಃಖದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ. ಕಾರಣಾಂತರಗಳಿಂದ ಹಲವು ಇಲಾಖೆಗಳ ಕಾರ್ಯ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಘಟನೆ ನಡೆಯುತ್ತಿದ್ದಂತೆ ಹಲ್ಯಾಳ ಪಂಚಾಯತಿ ಅಧ್ಯಕ್ಷ ಮತ್ತು ಗ್ರಾಮದ ಹಿರಿಯರು ಫೋನ್ ಮೂಲಕ ತಿಳಿಸಿದ ವೇಳೆ ಜಿಲ್ಲಾಡಳಿತ, ಮತ್ತು ತಾಲೂಕು ಆಡಳಿತದೊಂದಿಗೆ ತಾವು ಹಾಗೂ ಶಾಸಕ ಮಹೇಶ ಕುಮಟಳ್ಳಿ ನಿರಂತರವಾಗಿ ಸಂಪರ್ಕದಲ್ಲಿ ಮಾಹಿತಿ ಪಡೆದಿದ್ದೇವೆ ಎಂದಿದ್ದಾರೆ.

ಮೊದಲು ಪರಸುರಾಮ ನಂತರ ಉಳಿದ ಮೂವರ ಶವ ಮರುದಿನ ಪತ್ತೆಯಾಗಿದ್ದರಿಂದ ವೈಯುಕ್ತಿಕವಾಗಿ 2 ಲಕ್ಷ , ಶಾಸಕ ಮಹೇಶ ಕುಮಠಳ್ಳಿ 1 ಲಕ್ಷ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ನಿಮಿತ್ತ 4 ಲಕ್ಷ ರೂ. ತಾತ್ಕಾಲಿಕವಾಗಿ ಪರಿಹಾರ ಕೊಟ್ಟಿದ್ದೇವೆ. ಸರ್ಕಾರದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇವೆ ಎಂದು ತಿಳಿಸಿದ್ದಾರೆ.

Mahesh Kumathalli medium

ಈ ಸಂದರ್ಭದಲ್ಲಿ ಅಥಣಿ ಡಿವೈಎಸ್ಪಿ ಎಸ್.ವಿ. ಗಿರೀಶ್ , ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ , ತಾ.ಪಂ ಅಧಿಕಾರಿ ರವಿ ಬಂಗಾರಪ್ಪನವರ , ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಬಿ.ಜಿ. ಕಾಗೆ , ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ್ ಪಾಟೀಲ್ , ಉಪತಹಶೀಲ್ದಾರ ಮಹದೇವ ಬಿರಾದಾರ ಮತ್ತು ಪಂಚಾಯತಿ ಅಧ್ಯಕ್ಷ ಮುದಕಣ್ಣ ಶೇಗುಣಸಿ , ಚಂದ್ರಕಾಂತ್ ಕಾಗವಾಡ , ಮಹದೇವ ಬಿಸಲನಾಯಕ್ ಕುಮಾರಗೌಡ ಪಾಟೀಲ್ , ಬಾಳಪ್ಪ ಬಾಗಿ ಅಣ್ಣಪ್ಪ ಬಾಗಿ , ಸಂಗಮೇಶ್ ಇಂಗಳಿ , ಸಿದ್ದಪ್ಪ ಲೋಕುರ , ಸಿದ್ದಪ್ಪ ಪಾಟೀಲ್ ,ರಾಯಪ್ಪ ಬಾಗಿ ಮುರಗಪ್ಪ ಜಾಬಗೌಡರ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *