ಬಿಗ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ನಡುವೆ ತುಂಬಾ ಚೆನ್ನಾಗಿ ಮಾತನಾಡಿಕೊಂಡಿದ್ದ ರಘು ಮತ್ತು ವೈಷ್ಣವಿ ಅವರಲ್ಲಿ ಕೂಡ ಮೋಡ ಆವರಿಸಿತ್ತು. ಇದನ್ನು ಸರಿಪಡಿಸಿಕೊಳ್ಳಲು ಈ ಇಬ್ಬರು ಕೂಡ ಒಬ್ಬರಿಗೊಬ್ಬರು ಕೂತು ಮಾತನಾಡಿಕೊಂಡಿದ್ದಾರೆ.
ತಡರಾತ್ರಿ ಮಾತಿಗಿಳಿದ ವೈಷ್ಣವಿ ಮತ್ತು ರಘು ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳ ಬಗ್ಗೆ ಹೇಳಿಕೊಂಡರು. ನಾನು ನಿಮ್ಮೊಂದಿಗೆ ಮೂರ್ನಾಲ್ಕು ಬಾರಿ ಮಾತನಾಡಿಸಲು ಬಂದೆ ನೀವು ಮಾತನಾಡದೆ ನನ್ನನ್ನು ನೋಡದೆ ಹೋಗಿದ್ದಿರಿ ಎಂದು ವೈಷ್ಣವಿ ರಘುಗೆ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ರಘು, ನಾನು ನಿಮ್ಮೊಂದಿಗೆ ಮಾತನಾಡಲು ಬಂದೆ. ನಿಮ್ಮನ್ನು ಹೊರಗಡೆ ಮೋಡ ನೋಡಲು ಕರೆದಿದ್ದೆ ನೀವು ಬಂದಿರಲಿಲ್ಲ. ನಾನು ಮತ್ತೆ ಸುಮ್ಮನಾದೆ ಎಂದರು. ಇದನ್ನು ಕೇಳಿಸಿಕೊಂಡ ವೈಷ್ಣವಿ ನಾನು ಕೂಡ ನಿಮ್ಮನ್ನು ಮಾತನಾಡಿಸಲು ಬಂದೆ. ಏನಾಗಿದೆ ಎಂದು ಕೇಳಿದೆ ನೀವು ಏನಿಲ್ಲ ಎಂದು ಹೇಳಿದಾಗ ನಾನು ನಿಮಗೆ ಹುಚ್ಚುನಾಯಿ ಕಚ್ಚಿದ್ಯಾ ಎಂದು ಕೇಳಿದೆ ಎಂದು ವಿವರಿಸಿದರು. ಇದನ್ನೂ ಓದಿ: ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್
ನನಗೆ ನೀವು ಕೇಳಿದ್ದು ಕೇಳಿಸಿಲ್ಲ. ನಿಮಗೆ ಹುಚ್ಚುನಾಯಿ ಕಚ್ಚಿತ್ತ ಎಂದು ವೈಷ್ಣವಿಗೆ ಮರು ಪ್ರಶ್ನೆ ಹಾಕಿದ್ದಾರೆ. ವೈಷ್ಣವಿ ಇಲ್ಲ ಪರಿಸ್ಥಿತಿ ಹಾಗೆ ಅನಿಸುತ್ತಿತ್ತು. ಇಲ್ಲಿನ ಕೆಲವು ಘಟನೆಗಳನ್ನು ನೋಡಿದಾಗ ಮನಸ್ಥಿತಿ ಬದಲಾಗಬೇಕು ಎಂದು ಅಂದುಕೊಂಡಿದ್ದೇನೆ ಎಂದರು. ಬಳಿಕ ಪರಸ್ಪರ ಕ್ಷಮೆ ಯಾಚಿಸುತ್ತಾ ಮುಖದಲ್ಲಿ ನಗು ತರಿಸಿಕೊಂಡರು.