ಬಿಗ್ ಬಾಸ್ ಮನೆಯಲ್ಲಿ ರಣರೋಚಕ ಟಾಸ್ಕ್‍ಗಳ ಜೊತೆಗೆ ಜಗಳ, ಗುದ್ದಾಟಗಳ ನಡುವೆ ಬಂಧಗಳು ಸಹ ಬೆಸೆಯುತ್ತಿದ್ದು, ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಅದರಂತೆ ಬಿಗ್ ಮನೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮಂಜು ಪಾವಗಡಗೆ ರಾಖಿ ಕಟ್ಟಿಸಿಕೊಳ್ಳುವ ಭಾಗ್ಯ ಸಿಕ್ಕಿದೆ. ಆದರೆ ಮಂಜು ಕೊಂಚ ಬೇಸರ, ಖುಷಿಯಿಂದಲೇ ರಾಖಿ ಕಟ್ಟಿಸಿಕೊಳ್ಳಲಿ ಕೈ ಮುಂದೆ ಚಾಚಿದ್ದಾರೆ.
ಹೌದು ಈ ಕುರಿತ ಪ್ರೋಮೋ ಬಿಡುಗಡೆಯಾಗಿದ್ದು, ವೈಷ್ಣವಿ ಅವರು ಮಂಜು ಪಾವಗಡೆ ಅವರುಗೆ ರಾಖಿ ಕಟ್ಟಿದ್ದಾರೆ. ಟಾಸ್ಕ್ ಮಾಡುವ ವೇಳೆ ಸೀಟ್‍ನಲ್ಲಿ ಹಲವು ಸ್ಪರ್ಧಿಗಳು ಕುಳಿತಿದ್ದು, ಈ ವೇಳೆ ವೈಷ್ಣವಿ ಅವರು ದಾರವನ್ನು ತೆಗೆದುಕೊಂಡು, ಮಂಜಣ್ಣ ಸದ್ಯಕ್ಕೆ ರಾಕಿ ಇಲ್ಲ, ಇದನ್ನೇ ರಾಕಿ ಎಂದು ತಿಳಿದುಕೋ ಎನ್ನುತ್ತಾರೆ. ಆಗ ಮಂಜು ಪಾವಗಡ ರೈಟ್ ಹ್ಯಾಂಡೇ ಕೊಡ್ತೀನವ್ವಾ ಎಂದು ಕೈ ಮುಂದೆ ಚಾಚುತ್ತಾರೆ. ದುಃಖವಾಗುವ ರೀತಿ ನಾಟಕವಾಡುತ್ತ ಮಂಜು ವೈಷ್ಣವಿ ಅವರ ಕಡೆಯಿಂದ ರಾಕಿ ಕಟ್ಟಿಸಿಕೊಂಡಿದ್ದಾರೆ.
ರಾಕಿ ಕಟ್ಟುತ್ತಲೇ ಪ್ರಿಯಾಂಕಾ ವೈಷ್ಣವಿಗೆ ಏನು ಗಿಫ್ಟ್ ಕೊಡುತ್ತೀರಿ ಎಂದು ಹೇಳುತ್ತಾರೆ. ಆಗ ಶಮಂತ್ 500 ರೂ.ಬೇಕಂತೆ ಎನ್ನುತ್ತಾರೆ. ಮಂಜು ನಿನಗೋಸ್ಕರ ಏಲಕ್ಕಿ ಗಿಫ್ಟ್ ಕೊಡುತ್ತೇನೆ ಎಂದು ಹೇಳಿ ಏಲಕ್ಕಿ ನೀಡಿದ್ದಾರೆ. ಆಗ ವೈಷ್ಣವಿ ಇದೇನ್ ಮಂಜಣ್ಣ ಇಷ್ಟೊಂದು ಪ್ರೀತಿ ಕೊಡಬೇಡಿ ನೀವು ಎಂದು ಹೇಳುತ್ತಾರೆ. ನಿಮ್ ಹತ್ರ ಇದೆ ಅಂತ ಗೊತ್ತು, ಆದರೂ ನಾನೂ ಕೊ0ಡಬೇಕಲ್ಲ ಪ್ರೀತಿಯಾ, ತಗೋ ಈ ಪ್ರೀತಿ ಹೀಗೆ ಇರಲಿ ಎಂದು ಮಂಜು ಹೇಳುತ್ತಾರೆ.
ಈ ಮೂಲಕ ವೈಷ್ಣವಿ ಕಡೆಯಿಂದ ಮಂಜು ರಾಕಿ ಕಟ್ಟಿಸಿಕೊಂಡಿದ್ದು, ತಂಗಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಪ್ರೀತಿಯಿಂದ ವೈಷ್ಣವಿ ಸಹ ರಾಕಿ ಕಟ್ಟಿದ್ದಾರೆ. ಈ ಮೂಲಕ ಟಾಸ್ಕ್, ಜಗಳ ಕಿತ್ತಾಟಗಳ ಮಧ್ಯೆ ಬಾಂಧವ್ಯ ಸಹ ವೃದ್ಧಿಯಾಗುತ್ತಿದೆ.