ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಮಾಸ್ ಮೀಸೆಯೊಂದಿಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಮಾಹಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ರಾಂಚಿ ರಾಜಕುಮಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಅವರ ಉದ್ದನೆಯ ಕೂದಲು ಭಾರೀ ಟ್ರೆಂಡ್ ಸೃಷ್ಟಿಸಿತ್ತು. ಯುವಕರೆಲ್ಲಾ ಮಾಹಿಯಂತೆ ಕೂದಲು ಬೆಳೆಸಿ ಹೊಸ ಸಂಚಲನ ಸೃಷ್ಟಿಸಿದ್ದರು. ಆ ಬಳಿಕ ಧೋನಿ ಹಲವು ರೀತಿಯ ಕೇಶ ವಿನ್ಯಾಸಗಳಲ್ಲಿ ಗಮನ ಸೆಳೆದಿದ್ದರು. ಇದೀಗ ಧೋನಿ ತನ್ನ ಮೀಸೆಯ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಲು ಹೊರಟಿದ್ದಾರೆ. ಈ ರಗಡ್ ಲುಕ್ ಕಂಡು ಮಾಹಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಇದನ್ನೂ ಓದಿ: ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ
ಧೋನಿ 14ನೇ ಆವೃತ್ತಿಯ ಐಪಿಎಲ್ ಕೊರೋನಾದಿಂದಾಗಿ ಮುಂದೂಡಲ್ಪಟ್ಟ ಮೇಲೆ ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ತನ್ನ ಮುದ್ದಿನ ಮಗಳು ಝೀವಾ ಜೊತೆ ತುಂಟಾಟಗಳನ್ನು ಆಡುವ ಧೋನಿ ಇದೀಗ ಫೋಟೋ ಒಂದರಲ್ಲಿ ಈ ರೀತಿ ಮೀಸೆ ಬಿಟ್ಟು ಫೋಸ್ ನೀಡಿದ್ದಾರೆ. ಮಾಹಿಯ ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್
???????? Kannane
Kanney ????#WhistlePodu #Yellove ???? pic.twitter.com/aQJPtuZnJg
— Chennai Super Kings (@ChennaiIPL) June 21, 2021
ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದು, ಧೋನಿಗೆ ಈ ಲುಕ್ ಸೂಟ್ ಆಗುತ್ತದೆ ಹೀಗೆ ಇರಲಿ ಎಂದು ಅಭಿಮಾನಿಯೊಬ್ಬರು ಬರೆದುಕೊಂಡರೆ. ಇನ್ನೊಬ್ಬರು ಸಿಂಗಂ ಸ್ಟೈಲ್‍ನಂತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು ಕೂಡ ತಮ್ಮ ಬೇರೆ ಬೇರೆ ಕಾರ್ಯ ವೈಖರಿಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.