ಚಿತ್ರದುರ್ಗ: ಕದಂಬರ ದೊರೆ ಮಯೂರವರ್ಮನ ವೀರ ಪರಂಪರೆ ಸಾರುವ ಅದೆಷ್ಟೋ ಶಾಸನಗಳು ಕೋಟೆನಾಡು ಚಿತ್ರದುರ್ಗದಲ್ಲಿರೋದೇ ಒಂದು ಹೆಮ್ಮೆ. ಆದರೆ ನಿಧಿಗಳ್ಳರ ದುರಾಸೆಗೆ ಸ್ಮಾರಕಗಳು ವಿನಾಶದ ಅಂಚಿಗೆ ಬಂದು ತಲುಪಿವೆ. ಕಿಡಿಗೇಡಿಗಳು ಡೈನಾಮೇಟ್ ಇಟ್ಟು ಶಾಸನಗಳನ್ನು ಸ್ಪೋಟಿಸಿ ಕ್ರೌರ್ಯ ಮೆರೆದಿರುವ ದುಷ್ಕ್ರುತ್ಯ ಚಿತ್ರದುರ್ಗದ ಶ್ರೀ ಪರ್ವತದಲ್ಲಿ ನಡೆದಿದೆ.
ಹಚ್ಚಹಸಿರಿನ ವನ್ಯಧಾಮದ ನಡುವೆ ತಲೆಯೆತ್ತಿ ನಿಂತಿರುವ ಬೆಟ್ಟ ಗುಡ್ಡ, ನಿಶ್ಯಬ್ದ ವಾತಾವರಣ ನೋಡಿದರೆ ಮತ್ತೆ ನೋಡಬೇಕೆನ್ನುವ ಕಾತುರದ ಕುತೂಹಲ ಮೂಡಿಸುವ ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮದ ಪಕ್ಕದಲ್ಲಿರುವ ಶ್ರೀ ಪರ್ವತದಲ್ಲಿ ಕದಂಬರ ದೊರೆ ಮಯೂರವರ್ಮ ಚಿತ್ರದುರ್ಗದ ಈ ಸ್ಥಳದಲ್ಲಿ ತನ್ನ ಸೈನ್ಯವನ್ನು ಕಟ್ಟಿ ತಮ್ಮ ಸಂಸ್ಥಾನ ಸ್ಥಾಪಿಸಿದ ಹಿರಿಮೆ ಕೋಟೆನಾಡಿಗೆ ಇದೆ. ಆದರೆ ಆ ವೀರನ ಇತಿಹಾಸ ಸಾರುವ ಶಾಸನಗಳಿಗೆ ನಿಧಿಗಳ್ಳರು ಕೊಳ್ಳಿ ಇಟ್ಟಿದ್ದಾರೆ. ಇದನ್ನೂ ಓದಿ: ರಶ್ಮಿಕಾರನ್ನು ನೋಡಲು ತೆಲಂಗಾಣದಿಂದ ಬಂದು ಪೇಚಿಗೆ ಸಿಲುಕಿದ ಅಭಿಮಾನಿ..!
ಲಾಕ್ ಡೌನ್ ಹೊತ್ತಲ್ಲಿ ಜನಸಾಮಾನ್ಯರು ಮನೆಯಲ್ಲಿ ಇದ್ರೆ ಈ ನಿಧಿಗಳ್ಳರು ಮಾತ್ರ ಐತಿಹಾಸಿಕ ಪರಂಪರೆ ಸಾರುವ ದೇಶದಲ್ಲೇ ಅಪರೂಪದ ನಿರ್ಬಂಧಿತ ಶಾಸನಕ್ಕೆ ಡೈನಾಮೇಟ್ ಇಟ್ಟು ಸ್ಫೋಟಿಸಿ, ವಿರೂಪಗೊಳಿಸಿದ್ದಾರೆ. ಅಲ್ಲದೇ ಸ್ಮಾರಕದ ಸುತ್ತ 20 ಅಡಿ ಅಗಲ, 12 ಅಡಿ ಉದ್ದ ಗುಂಡಿ ತೋಡುವ ಮೂಲಕ ಹಲವು ದಿನಗಳಿಂದ ನಿಧಿಗಾಗಿ ಶೋಧಿಸಿದ್ದಾರೆ. ಹೀಗಾಗಿ ಕೃತ್ಯದಿಂದ ಆಕ್ರೋಶಗೊಂಡಿರುವ ಇತಿಹಾಸ ಪ್ರಿಯರು ನಿಧಿಗಳ್ಳರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಮಯೂರವರ್ಮನ ಐತಿಹಾಸಿಕ ಸ್ಥಳದಲ್ಲಿ ನಿಧಿಗಾಗಿ ಶೋಧ ನಡೆಸಿರುವ ಕಳ್ಳರು, ಜಾಗದಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತುಗಳು, ಕಬ್ಬಿಣದ ಆಯುಧಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಆದರೆ ಈವರೆಗೆ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯೂ ತಿರುಗಿ ನೋಡಿಲ್ಲ. ಹೀಗಾಗಿ ಅಲ್ಲದೆ ಸಂಬಂಧಪಟ್ಟ ಪುರಾತತ್ವ ಇಲಾಖೆ, ಜಿಲ್ಲಾಡಳಿತ ದುಷ್ಕೃತ್ಯವೆಸಗಿದ ನಿಧಿ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಈ ಘಟನೆ ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.