ಮದ್ವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನೀವೇನು ಯೋಚಿಸ್ತೀರಿ? ಅನುರಾಗ್ ಕಶ್ಯಪ್ ಗೆ ಪುತ್ರಿಯ ಪ್ರಶ್ನೆ

Public TV
1 Min Read
Anurag Kashyap

ಮುಂಬೈ: ಮದುವೆಗೂ ಮುನ್ನ ಸೆಕ್ಸ್ ನಡೆಸಿದ್ರೆ, ನೀವು ನನ್ನ ಬಗ್ಗೆ ಏನೂ ಯೋಚಿಸುತ್ತೀರಿ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಗೆ  ಅವರ ಪುತ್ರಿ ಆಲಿಯಾ  ಪ್ರಶ್ನೆ ಮಾಡಿದ್ದಾಳೆ.

ಅನುರಾಗ್ ಕಶ್ಯಪ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಲಿಯಾ ತಂದೆಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಮದುವೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಕೇಳಿದ್ದಾಳೆ.

Anurag Kashyap 3 medium

ಮಗಳ ಪ್ರಶ್ನೆಗೆ ಉತ್ತರಿಸಿರುವ ಅನುರಾಗ್ ಕಶ್ಯಪ್, ಇದೆಂತಹ ಪ್ರಶ್ನೆ? 80ರ ದಶಕದಲ್ಲಿ ನಾವು ಈ ಪ್ರಶ್ನೆಗಳನ್ನು ಕೇಳುತ್ತಿದ್ದೀವಿ. ಈ ಪ್ರಶ್ನೆಯಿಂದ ಮುಂದೆ ಹೋಗೋಣ ಎಂದು ಉತ್ತರ ನೀಡಿದ್ದಾರೆ. ನಾವು ಕಾಲೇಜಿನಲ್ಲಿದ್ದಾಗ ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೇವು. ನಾವು ಬೇರೆಯವರಿಗೆ ಈ ಬಗ್ಗೆ ಉಪದೇಶ ಸಹ ನೀಡುವ ಪ್ರಯತ್ನ ಮಾಡುತ್ತಿದ್ದೇವು ಎಂದು ತಂದೆ ಹೇಳಿದಾಗ, ಮದುವೆಗೆ ಮುನ್ನ ಸೆಕ್ಸ್ ಬಗ್ಗೆಗಿನ ಮಾತುಗಳು ನಾರ್ಮಲ್? ಎಂದು ಮರುಪ್ರಶ್ನೆ ಹಾಕಿದ್ದಾಳೆ. ಸದ್ಯ ಸಮಯ ಸಾಕಷ್ಟು ಬದಲಾಗಿದೆ. ಈ ವೇಳೆ ಇಂತಹ ಪ್ರಶ್ನೆಗಳು ಅವಶ್ಯ ಅಲ್ಲ ಎಂದು ಅನುರಾಗ್ ಕಶ್ಯಪ್ ಮಾತು ಬದಲಿಸಿದ್ದಾರೆ.

Anurag Kashyap 4 medium

ಗೆಳೆಯ ಶೆನ್ ಗ್ರಗೊಯರ್ ಜೊತೆ ಆಲಿಯಾ ಮುಂಬೈಗೆ ಬಂದಿದ್ದು, ಇದೇ ವೀಡಿಯೋದಲ್ಲಿ ಪ್ರಿಯಕರನ ಬಗ್ಗೆ ಕೇಳಿದ್ದಾಳೆ. ನನಗೆ ನಿನ್ನ ಗೆಳೆಯ ಶೆನ್ ಇಷ್ಟ, ನೀನು ಗೆಳೆಯರ ಆಯ್ಕೆಯ ಬಗ್ಗೆ ಮೆಚ್ಚುಗೆ ಇದೆ. ಶೆನ್ ಒರ್ವ ಒಳ್ಳೆಯ ಆಧ್ಯಾತ್ಮಿಕ, ಶಾಂತ ಸ್ವಭಾವದ ಹುಡುಗ. 40 ವರ್ಷದ ಪುರುಷರಂತ ಮೆಚ್ಯೂರ್ ಮೈಂಡ್ ಹುಡುಗ ಎಂದು ಮಗಳ ಗೆಳೆಯನ ಗುಣಗಾನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *