ಜಮೈಕಾ: ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ತಾನು ಅವಳಿ ಗಂಡು ಮಕ್ಕಳಿಗೆ ತಂದೆಯಾಗಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೀವೂ ಮಾಡಿ ಚಿಕನ್ ಕಟ್ಲೆಟ್
ನನ್ನ ಪತ್ನಿ ಬೆನೆಟ್ ಅವಳಿ ಗಂಡು ಮಕ್ಕಳಿಗೆ ಜನ್ನ ನೀಡಿದ್ದಾಳೆ. ಒಬ್ಬ ಥಂಡರ್ ಬೋಲ್ಟ್, ಮತ್ತೂಬ್ಬ ಸೆಂಟ್ ಲಿಯೋ ಬೋಲ್ಟ್ ಎಂದು ಮಕ್ಕಳ ಹೆಸರಾಗಿದೆ ಎಂದು ಬರೆದುಕೊಂಡು ಮಕ್ಕಳ ಜೊತೆಗೆ ಕುಳಿತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಬೋಲ್ಟ್ ದಂಪತಿಗೆ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಹೆಸರಿನ ಮಗಳೂ ಇದ್ದಾಳೆ. ಇದೀಗ ಉಸೇನ್ ಅವಳಿ ಗಂಡು ಮಕ್ಕಳಿಗೆ ತಂದೆಯಾದ ಬೆನ್ನಲ್ಲೇ ಸಾಮಾಜಿ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಸಖತ್ ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. 2040ರ ಒಲಂಪಿಕ್ಸ್ ನಲ್ಲಿ ಓಟದಲ್ಲಿ ಉಸೇನ್ ಬೋಲ್ಟ್ ಅವಳಿ ಗಂಡು ಟ್ರ್ಯಾಕ್‍ನಲ್ಲಿ ಓಡುವುದನ್ನು ಕಲ್ಪಸಿಕೊಳ್ಳಿ ಎಂದು ನೆಟ್ಟಿಗರು ಕಮೆಂಟ್ ಮಡುತ್ತಿದ್ದಾರೆ.