ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐತಿಹಾಸಿಕ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಇಂಗ್ಲೆಂಡ್‍ನ ಸೌಥಂಪ್ಟನ್‍ನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಶುಕ್ರವಾರ ಮಳೆ ಅಡ್ಡಿಯಾಗಿತ್ತು. ಹಾಗಾಗಿ ಇಂದಿನಿಂದ ಪಂದ್ಯ ಆರಂಭವಾಗಿದೆ. ಇಂದು ಟಾಸ್ ಪ್ರಕ್ರಿಯೆ ನಡೆದು ಕೇನ್ ವಿಲಿಯಮ್ಸನ್ ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದ್ದಾರೆ. ಭಾರತ ಪರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?
Final. 10.2: K Jamieson to S Gill (19), 4 runs, 41/0 https://t.co/CmrtWsugSK #INDvNZ
— BCCI (@BCCI) June 19, 2021
ಶುಕ್ರವಾರ ಪಂದ್ಯ ಆರಂಭವಾಗಬೇಕಿತ್ತು ಅದರೆ ಮಳೆಯಿಂದ ಟಾಸ್ಕ್ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಬಳಿಕ ಮಳೆ ಬಿಟ್ಟರು ಕೂಡ ಮೈದಾನ ಒದ್ದೆಯಾಗಿದ್ದರಿಂದಾಗಿ ಪಂದ್ಯವನ್ನು ಇಂದಿಗೆ ಮುಂದೂಡಲ್ಪಟ್ಟಿತ್ತು. ಇದೀಗ ವಿಶ್ವದ ಎರಡು ಬಲಾಢ್ಯ ತಂಡಗಳು ಟೆಸ್ಟ್ ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡುತ್ತಿವೆ.