ಹಾಸನ: ತನ್ನ ತಾಯಿಯ ಬಗ್ಗೆ ಅನುಚಿತವಾಗಿ ಮಾತಾನಾಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಇಬ್ಬರು ಅಪ್ರಾಪ್ತರನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮೇಶ್ ಮೃತನಾಗಿದ್ದಾನೆ. ಈತ ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ, ಚಿಕ್ಕೊಂಡನಹಳ್ಳಿ ಬಳಿ, ಅರಸೀಕೆರೆ ತಾಲೂಕಿನ ಕಣಕಟ್ಟೆ ಗ್ರಾಮದ ನಿವಾಸಿಯಾಗಿದ್ದನು. ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಸುಮೇಶ್‍ನನ್ನು ದೊಣ್ಣೆಯಿಂದ ಹೊಡೆದು ಅಪ್ರಾಪ್ತರು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: 2.5 ಲಕ್ಷಕ್ಕೆ ಒಂದು ಕೆಜಿ ಮಾವು – ತೋಟದ ಕಾವಲಿಗೆ 3 ಗಾರ್ಡ್ ನೇಮಕ
ಸುಮೇಶ್‍ನನ್ನು ಕೊಂದು, ಗುರುತು ಸಿಗದಂತೆ ಪೆಟ್ರೋಲ್ ಹಾಕಿ ಸುಟ್ಟಿದ್ದರು. ಕೈಕಡಗ ಹಾಗೂ ಉಂಗುರದ ಮೂಲಕ ಮೃತವ್ಯಕ್ತಿಯ ಗುರುತು ಪತ್ತೆ ಮಾಡಲಾಗಿತ್ತು. ಇದೀಗ ಪ್ರಕರಣ ಬೇಧಿಸಿರುವ ಬಾಣಾವರ ಪೊಲೀಸರು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ಬಾಲಕನೊಬ್ಬನ ತಾಯಿಯ ಬಗ್ಗೆ, ಕೊಲೆಯಾಗಿದ್ದ ವ್ಯಕ್ತಿ ಅನುಚಿತವಾಗಿ ಮಾತನಾಡಿದ್ದ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಬಾಲಕ ಆತನ ಸ್ನೇಹಿತನೊಂದಿಗೆ ಸೇರಿ ಪ್ಲಾನ್ ಮಾಡಿ ಮರ್ಡರ್ ಮಾಡಿದ್ದಾನೆ. ಇದನ್ನೂ ಓದಿ: ಮುಖಕ್ಕೆ ಎಂಜಲು ಹಚ್ಚಿಕೊಳ್ಳುತ್ತೇನೆ: ಮಿಲ್ಕಿ ಬ್ಯೂಟಿ ತಮನ್ನಾ
ಮದ್ಯ ನೀಡೋದಾಗಿ ಹೇಳಿ ಸುಮೇಶ್‍ನನ್ನು ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡ ಹೋದ ಬಾಲಕರು, ಕುಡಿಯುತ್ತಿದ್ದ ಸುಮೇಶ್‍ನನ್ನು ದೊಣ್ಣೆಯಿಂದ ಹೊಡೆದು ಸಾಯಿಸಿ, ಬಳಿಕ ಗುರುತು ಸಿಗದಂತೆ ಪೆಟ್ರೋಲ್ ಸುರಿದು ಬೆಂಕಿಹಾಕಿ ಪರಾರಿಯಾಗಿದ್ದರು, ಇದೀಗ ಈ ಪ್ರಕರಣವನ್ನು ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.