ಮೈಸೂರು: ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ನೂರಾರು ಚಲನಚಿತ್ರ ಕಲಾವಿದರು, ಸಹ ಕಲಾವಿದರು ಮತ್ತು ಹವ್ಯಾಸಿ ರಂಗಕರ್ಮಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಆಹಾರ ಕಿಟ್ ವಿತರಿಸಿದ್ದಾರೆ.
ಮೈಸೂರಿನಲ್ಲಿ ನೂರಾರು ಕಲಾವಿದರು ಕೊರೊನಾದಿಂದಾಗಿ ಯಾವುದೇ ಶೂಟಿಂಗ್ ಹಾಗೂ ಕಾರ್ಯಕ್ರಮವಿಲ್ಲದೆ ಕಷ್ಟಪಡುತ್ತಿರುವುದನ್ನು ಮನಗಂಡು ಸೋಮಶೇಖರ್ ಅವರು ಕೃಷಿ ಸಚಿವ ಬಿ.ಸಿ ಪಾಟೀಲ್ ಉಪಸ್ಥಿತಿಯಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಲಸಿಕಾಕರಣಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್
ಕಲಾವಿದರಿಗೆ 520ಕ್ಕೂ ಹೆಚ್ಚು ಆಹಾರ ಕಿಟ್‍ಗಳನ್ನು ನೀಡಿದ್ದು, ಈ ಪೈಕಿ 120 ಚಲನಚಿತ್ರ ಸಹ ಕಲಾವಿದರಿಗೆ ಹಾಗೂ 400 ರಂಗಕರ್ಮಿಗಳಿಗೆ ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಕಿಟ್ ಅಗತ್ಯವಿದ್ದರೆ ಒದಗಿಸಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ ಅವರು ಮಾಹಿತಿ ನೀಡಿದ್ದಾರೆ.