ಸುರೇಶ್ ರೈನಾ ಆತ್ಮಚರಿತ್ರೆ ‘ಬಿಲೀವ್’ ಬಿಡುಗಡೆ

Public TV
2 Min Read
SURESHRAINA

ಮುಂಬೈ: ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಇದೀಗ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಅವರೆ ಬರೆದಿರುವ ಅವರ ಆತ್ಮಚರಿತ್ರೆ ಬಿಲೀವ್ ಎಂಬ ಪುಸ್ತಕವನ್ನು ಇಂದು ಬಿಡುಗಡೆ ಮಾಡಿದ್ದಾರೆ.

Suresh Raina

ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ರೈನಾ ಆತ್ಮೀಯ ಗೆಳೆಯ ಮಹೇಂದ್ರ ಸಿಂಗ್ ಧೋನಿಯೊಂದಿಗೆ 2020ರ ಆಗಸ್ಟ್‍ನಲ್ಲಿ ಅಂತರಾಷ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದರು. ಇದೀಗ ನಿವೃತ್ತಿಯ ಬಳಿಕ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ಆತ್ಮಚರಿತ್ರೆಯೊಂದನ್ನು ಬರೆದಿದ್ದಾರೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

SURESH RAINA 1 medium

ರೈನಾ ತಮ್ಮ ಆತ್ಮ ಚರಿತ್ರೆಗೆ ಸಚಿನ್ ತೆಂಡುಲ್ಕರ್ ಅವರು ನೀಡಿರುವ ಸ್ಪೂರ್ತಿಯ ಪದ ‘ಬಿಲೀವ್’ ಎಂಬ ಹೆಸರನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ರೈನಾ ಅವರ ಕ್ರಿಕೆಟ್ ಪಯಣದಲ್ಲಿ ಕಾಣಿಸಿಕೊಂಡ ಸವಾಲುಗಳು, ಗಾಯ, ವೈಫಲ್ಯ, ಸ್ನೇಹ, ಸ್ಟಾರ್ ಆಟಗಾರನಾದ ಕಥೆ ಹೀಗೆ ಹಲವಾರು ವಿಷಯಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

raina suresh

ರೈನಾ ಬಿಲೀವ್ ಎಂಬ ಪದವನ್ನು ಈ ಹಿಂದೆ ತಮ್ಮ ಕೈಯಲ್ಲಿ ಅಚ್ಚೆ ಹಾಕಿಸಿಕೊಂಡಿದ್ದರು. ಇದು ಸಚಿನ್ ಅವರಿಂದ ಸ್ಪೂರ್ತಿಯಾಗಿ ಪಡೆದ ಪದ ಆಗಿರುವುದರಿಂದ ಪುಸ್ತಕಕ್ಕೂ ರೈನಾ ಇದೇ ಹೆಸರು ನೀಡಿದ್ದು, ಆತ್ಮಚರಿತ್ರೆಯನ್ನು ಬರಹಗಾರ ಭರತ್ ಸುಂದರೇಸನ್ ಅವರ ಸಹಾಯದಿಂದ ಬರೆದಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್ ನಿಗದಿ ಬೆನ್ನಲ್ಲೇ ಟ್ರೋಲ್ ಆದ ಸುರೇಶ್ ರೈನಾ

https://twitter.com/ImRaina/status/1403365853425397760

ರೈನಾರ ಈ ಪುಸ್ತಕದಲ್ಲಿ ಭಾರತ ತಂಡದ ಮಾಜಿ ಅಟಗಾರರು ಮತ್ತು ಹಾಳಿ ಆಟಗಾರರ ಬಗ್ಗೆ ಕೆಲವು ಸ್ವಾರಸ್ಯಕರವಾದ ವಿಷಯಗಳಿವೆ. ಇದರೊಂದಿಗೆ ತನ್ನ ಸಹ ಆಟಗಾರರಾಗಿದ್ದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಮತ್ತಿತರರನ್ನು ಯಾವ ರೀತಿ ಅರಿತುಕೊಂಡು ಕ್ರಿಕೆಟ್‍ನಲ್ಲಿ ಮುನ್ನಡೆದೆ ಮತ್ತು ಅವರಿಂದ ಕಲಿತಂತಹ ಪಾಠಗಳು, ಸ್ನೇಹ, ಸಂಬಂಧ ಹೀಗೆ ಹಲವು ವಿಷಯಗಳನ್ನು ಬರೆದುಕೊಂಡಿದ್ದಾರೆ.

Suresh Raina

ರೈನಾ ಭಾರತದ ಪರ ಒಟ್ಟು 18 ಟೆಸ್ಟ್ ಪಂದ್ಯದಿಂದ 768ರನ್, 226 ಏಕದಿನ ಪಂದ್ಯದಿಂದ 5,615 ರನ್ ಮತ್ತು 78 ಟಿ20 ಪಂದ್ಯದಿಂದ 1,604 ರನ್ ಗಳಿಸಿದ್ದಾರೆ.ರೈನಾ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಇದೀಗ ಐಪಿಎಲ್‍ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *