ಚಿತ್ರದುರ್ಗ: ಕೊರೊನಾ ಲಾಕ್‍ಡೌನ್ ನಿಂದಾಗಿ ಜನರು ಕಂಗಾಲಾಗಿದ್ದಾರೆ. ಇಂತಹ ವೇಳೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಸಿದ್ದಾಪುರದಲ್ಲಿ ಮಾತು ಬಾರದ ಹಾಗೂ ಕಿವಿ ಕೇಳದ ವಿಶೇಷ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದ ಸೌಮ್ಯ, ದಾವಣಗೆರೆಯ ಪರಶುರಾಮ ವಿವಾಹವಾದ ನೂತನ ವಧು ವರರಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸಾಂಪ್ರದಾಯಿಕ ಮದುವೆಯಲ್ಲಿ ಹಲವು ಜನರು ಭಾಗಿಯಾಗಿದ್ದರು. ಮಾತು ಬಾರದ ಹಾಗೂ ಕಿವಿ ಕೇಳದ ಈ ಅಪರೂಪದ ಮುಗ್ದ ಜೋಡಿಯ ವಿವಾಹ ಯಾವುದೇ ಅಡತಡೆಯಿಲ್ಲದೇ ನಡೆದಿದೆ.
ಮಾತು ಬರದಿದ್ದರು, ಕಿವಿ ಕೇಳದಿದ್ದರು ಮನಸಾರೆ ಒಪ್ಪಿ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ ಜೋಡಿಗೆ ಬಂಧು ಮಿತ್ರರು ಮನಸಾರೆ ಹರಸಿ ಶುಭ ಹಾರೈಸಿದ್ದಾರೆ.