ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿ

Public TV
2 Min Read
Kolar baby birth

ಕೋಲಾರ: ಮೂರು ಜನ ಗಂಡು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿದ್ದಾಳೆ. 3 ಜನ ಮಕ್ಕಳು ಆರೋಗ್ಯವಾಗಿದ್ದು ಅಚ್ಚರಿ ಮೂಡಿಸಿದ ಘಟನೆ ಕೋಲಾರದಲ್ಲಿ ವರದಿಯಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಗೊಲ್ಲಹಳ್ಳಿ ನಿವಾಸಿ ಶ್ರೀರಾಮ್ ಹಾಗೂ ಮುನಿರತ್ನ ದಂಪತಿಗಳಿಗೆ ಮೂರು ಜನ ಮಕ್ಕಳಾಗಿದ್ದು ಇವರಲ್ಲಿ ಸಂತೋಷ ಮಡುಗಟ್ಟಿದೆ. ಮೂರು ಮಕ್ಕಳು ಹುಟ್ಟಿರುವ ಸಂತೋಷ ಒಂದೆಡೆಯಾದ್ರೆ ಮಕ್ಕಳನ್ನ ಪೋಷಣೆ ಮಾಡೋದು ಕೂಡ ವ್ಯವಸಾಯ ಮಾಡಿಕೊಂಡಿರುವ ಬಡ ಕುಟುಂಬಕ್ಕೆ ಸವಾಲಾಗಿದೆ. ಇದನ್ನೂ ಓದಿ:  ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಜಗದೀಶ್ ಶೆಟ್ಟರ್

Kolar baby birth2 medium

ಬಡ ರೈತನಾಗಿರುವ ಶ್ರೀರಾಮ್ ಹಾಗೂ ಮುನಿರತ್ನ ದಂಪತಿಗಳಗೆ ಮೊದಲು ಒಂದು ಹೆಣ್ಣು ಮಗುವಾಗಿದೆ. ಎರಡನೆ ಬಾರಿ ಗರ್ಭವತಿಯಾದಾಗ ವೈದ್ಯರ ಬಳಿ ಪರೀಕ್ಷೆ ಮಾಡಿದಾಗ ಅವಳಿ-ಜವಳಿ ಮಕ್ಕಳಾಗುತ್ತೆ ಎಂದು ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ವೈದ್ಯರು ದೃಢಪಡಿಸಿದ್ದರು. ಬಳಿಕ ಹೆರಿಗೆಗೆ ಇದೆ ಬುಧವಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅಂದೆ ಮದ್ಯಾಹ್ನ ಆಪರೇಷನ್ ಮಾಡುವ ಮೂಲಕ ಮಕ್ಕಳನ್ನ ಹೊರ ತೆಗೆದಿದ್ದು, ಟ್ವಿನ್ಸ್ ಮಕ್ಕಳಾಗುವ ಮೂಲಕ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಮುಂದಿನ ಜೂನ್ ಅಂತ್ಯದ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಸಿಎಂ ಯಡಿಯೂರಪ್ಪ

Kolar baby birth5 medium

ಇತ್ತೀಚೆಗಿನ ವರದಿಗಳ ಪ್ರಕಾರ ಸಾಕಷ್ಟು ದಂಪತಿಗಳಲ್ಲಿ ಬಂಜೇತನ ಹೆಚ್ಚಾಗಿದ್ದು, 10 ರಲ್ಲಿ 7 ಜನರಿಗೆ ಮಾತ್ರ ಮಕ್ಕಳಾಗುತ್ತಿವೆ. ಉಳಿದಂತೆ 3 ಜನ ದಂಪತಿಗಳು ಮಕ್ಕಳಿಲ್ಲದೆ ಮಕ್ಕಳಿಲ್ಲ ಅನ್ನೋ ಕೊರಗಿನಲ್ಲಿದ್ದಾರೆ. ಆದರೆ ಶ್ರೀರಾಮ್ ದಂಪತಿಗಳ ಅದೃಷ್ಟವೇನೋ ಮೂರು ಜನ ಗಂಡು ಮಕ್ಕಳಾಗಿದ್ದು, 3 ಮಕ್ಕಳು ಆರೋಗ್ಯ ವಾಗಿದ್ದಾರೆ. ಇದೆ ಬುಧವಾರ ಹೆರಿಗೆಗೆಂದು ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರಿಗೂ ಇದೊಂದು ಅಚ್ಚರಿಯ ಜೊತೆಗೆ ಸವಾಲಾಗಿತ್ತು. ಇದನ್ನೂ ಓದಿ: ಆಭರಣ ಧರಿಸಿ ಮಿಯಾ ಖಲೀಫಾ ಹಾಟ್ ಫೋಟೋಶೂಟ್

Kolar baby birth9 medium

ಯಾಕಂದ್ರೆ 3 ಮಕ್ಕಳ ಜೊತೆಗೆ ತಾಯಿ ಜೀವ ರಕ್ಷಣೆ ಮಾಡೋದು ಕೂಡ ವೈದ್ಯರಿಗೆ ಸವಾಲಾಗಿತ್ತು. ಹಾಗಾಗಿ ಸಾಕಷ್ಟು ಪರಿಶ್ರಮ ಹಾಕುವ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿರುವ ಜಿಲ್ಲಾಸ್ಪತ್ರೆ ವೈದ್ಯೆ ಡಾ,ನಾಗವೇಣಿ ಮಕ್ಕಳ ಆರೈಕೆ ಮಾಡಿದ್ದಾರೆ. 3 ಜನ ಗಂಡು ಮಕ್ಕಳು 2 ಕೆಜಿ ಯಷ್ಟು ತೂಕವಿದ್ದು, 3 ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

baby birth medium

ಬಡ ಕುಟುಂಬಕ್ಕೆ 3 ಮಕ್ಕಳ ಆಗಮನ ಖುಷಿಯಾಗಿದ್ದು, ಜಿಲ್ಲಾಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆ ಸಧ್ಯ ಅಚ್ಚರಿಯ ತಾಣವಾಗಿದೆ. ಮಕ್ಕಳ ಆರೈಕೆ ಹಾಗೂ ಪೋಷಣೆ ಪೋಷಕರಿಗೂ ಸವಾಲಾಗಿ ಪರಿಣಮಿಸಿದ್ದು, 3 ಮಕ್ಕಳನ್ನ ಚನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಪೋಷಕರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *