ಬೆಂಗಳೂರು: ಟಿ.ದಾಸರಹಳ್ಳಿ ಸಮೀಪದ ಗಣಪತಿ ನಗರದಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೊರೊನಾ ಪರೀಕ್ಷೆ ಮಾಡುವ ಆರೋಗ್ಯ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ವಹಿಸಿದೆ ಟೆಸ್ಟ್ ಮಾಡುತ್ತಿದ್ದು ಸಾರ್ವಜನಿಕದ ಟೀಕೆಗೆ ವ್ಯಕ್ತವಾಗಿದೆ.
ಚಿಕ್ಕಬಾಣಾವರ ಸರ್ಕಾರಿ ಆಸ್ಪತ್ರೆವತಿಯಿಂದ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಯಾವುದೇ ಸಾಮಾಜಿಕ ಅಂತರ ಕೂಡ ಪಾಲಿಸಿಲ್ಲ. ಜೊತೆಗೆ ವ್ಯಾಕ್ಸಿನ್ ಕೂಡ ಜೊತೆಯಲ್ಲೆ ನೀಡುತ್ತಿರುವುದರಿಂದ ಸೆಂಟರ್ ತುಂಬಾ ಜನರ ಜಮಾವಣೆ ಆಗಿದ್ದು, ಕೊರೊನಾ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ಆರೋಪಸಿದ್ದಾರೆ.
ಜನರು ಕೂಡಾ ನಿಯಮಗಳನ್ನ ಗಾಳಿಗೆ ತೂರಿದ್ದು ಅಂತರ ಹಾಗೂ ಮಾಸ್ಕ್ ಧರಿಸದೆ ಮುಗಿಬಿದ್ದ ಜನರು ನಿಯಮವನ್ನ ಮರೆತಿದ್ದಾರೆ.