ಸಿಎಂ ಬದಲಾದರೆ ಸಚಿವ ಸಂಪುಟ ಬದಲಾವಣೆ ಆಗಲೇಬೇಕಲ್ಲ- ಅಪ್ಪಚ್ಚು ರಂಜನ್

Public TV
1 Min Read
appachu ranjan

– ನಾನು ಸಚಿವ ಸಂಪುಟದ ಆಕಾಂಕ್ಷಿ

ಮಡಿಕೇರಿ: ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಸಿಎಂ ಬದಲಾದರೆ ಸಚಿವ ಸಂಪುಟ ಬದಲಾವಣೆ ಆಗಲೇಬೇಕಲ್ಲ. ನಾನು ಸಚಿವ ಸಂಪುಟದ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ.

BSY B S Yediyurappa

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಚರ್ಚೆಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬೇಸರವಾಗಿದೆ. ಸಿಎಂ ಬದಲಾದರೆ ಸಚಿವ ಸಂಪುಟ ಬದಲಾಗಬೇಕಲ್ಲ. ಹಾಗಾದಲ್ಲಿ ನಾನು ಸಚಿವ ಸಂಪುಟದ ಆಕಾಂಕ್ಷಿ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಬಳಿಕ ಉತ್ತರ ಕರ್ನಾಟಕದ ವೀರಶೈವರಿಗೆ ಸಿಎಂ ಸ್ಥಾನ ನೀಡಿದ್ರೆ ಸೂಕ್ತ: ಎಚ್.ವಿಶ್ವನಾಥ್

ಯಡಿಯೂರಪ್ಪ ಈಗಲೂ ನಮ್ಮ ನಾಯಕರೇ ಅದರೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಸಿಎಂ ಬದಲಾದರೆ ಮತ್ತೆ ಸಚಿವ ಸಂಪುಟ ವಿಸ್ತರಣೆ ಅಗುತ್ತದೆ. ವಿಸ್ತರಣೆ ಅದರೆ ನಾನು ಸಚಿವ ಆಕಾಂಕ್ಷಿನೇ ನಾನು ಐದು ಬಾರಿ ಶಾಸಕನಾಗಿ ಗೆದ್ದಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ:ಯಡಿಯೂರಪ್ಪ ರಾಜೀನಾಮೆ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

Appachu Ranjan 1

ಯಡಿಯೂರಪ್ಪ ಅವರು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ತಮ್ಮ ಮಗನಿಗೆ ಪಟ್ಟ ಕಟ್ಟಬೇಕೆಂದು ಹೇಳಿದ್ದು ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಏನು ಸೂಚನೆ ಕೊಡುತ್ತದೋ ಅದು ಅಂತಿಮ. ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ನಾನು 80ರ ದಶಕದಿಂದಲೂ ಬಿಜೆಪಿಯಲ್ಲಿ ಇದ್ದೇನೆ. ಈ ಹಿಂದಿನಿಂದಲೂ ಸಚಿವ ಆಕಾಂಕ್ಷಿಯಾಗಿದ್ದೇನೆ. ಸಿಎಂ ಬದಲಾದರೆ ಸಚಿವ ಸಂಪುಟ ಬದಲಾಗಬೇಕು ಹೀಗಾಗಿ ನನಗೆ ಸಚಿವ ಸ್ಥಾನ ಕೊಡಲೇ ಬೇಕು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *