ಅಪ್ಪ ಚಿರುವನ್ನು ಗುರುತಿಸುತ್ತಿರೋ ನನ್ನ ಮಗನನ್ನು ನೋಡಲು ಹೆಮ್ಮೆಯಾಗ್ತಿದೆ: ಮೇಘನಾ

Public TV
2 Min Read
CHIRU 1

ಬೆಂಗಳೂರು: ನನ್ನ ಮಗ ಪ್ರತಿದಿನ ಚಿರು ಸರ್ಜಾ ಫೋಟೋ ನೋಡಿ ಗುರುತಿಸುತ್ತಿದ್ದಾನೆ. ಈ ಸಂದರ್ಭವನ್ನು ನೋಡಲು ನನಗೆ ತುಂಬಾಹೆಮ್ಮೆಯಾಗುತ್ತಿದೆ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.

Junior Chiru Meghana Raj Chiranjeevi 1

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಕುಟ್ಟಿಮಾ, ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ನಾನು ಜೂನಿಯರ್ ಚಿರುವನ್ನು ಎತ್ತಿಕೊಂಡು ಹೋಗಿ ಚಿರು ಫೋಟೋ ತೋರಿಸುತ್ತಿದ್ದೇನೆ. ಈ ವೇಳೆ ಆತ ತನ್ನ ತಂದೆಯನ್ನು ಗುರುತಿಸುತ್ತಾನೆ. ಅಲ್ಲದೆ ಚಿರು ಫೋಟೋದಲ್ಲಿದ್ದಾರೆ ಎಂಬುದನ್ನು ಅರಿಯದ ಮುಗ್ಧ ಕಂದಮ್ಮ ಅವರೊಂದಿಗೆ ಆಟವಾಡಲು ಪ್ರಯತ್ನಿಸುತ್ತಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀನು ದೇವರಮನೆಗೆ ಹೋಗಿ ವರುಷವಾಯ್ತು: ಮೇಘನಾ ರಾಜ್ ಸರ್ಜಾ

meghana sarja chiranjeevi sarja junior chiru photo

ಪ್ರತಿ ದಿನ ಮಗ ಎದ್ದ ತಕ್ಷಣ ಚಿರು ಫೋಟೋ ಬಳಿ ಎತ್ತಿಕೊಂಡು ಹೋಗಿ ಅಪ್ಪ ನೋಡು ಎಂದು ಹೇಳುತ್ತೇನೆ. ಆಗ ಅವನು ಚಿರುವನ್ನು ನೋಡಿ ತುಂಬಾ ಖುಷಿ ಪಡುತ್ತಾನೆ. ಅಲ್ಲದೆ ಫೋಟೋವನ್ನು ಎಳೆದುಕೊಂಡು ಎತ್ತಿಕೊಳ್ಳುವಂತೆ ಅವನದ್ದೇ ಭಾಷೆಯಲ್ಲಿ ಹೇಳುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪನ ಫೋಟೋ ಜೊತೆ ಆಟ ಆಡಿದ ಜ್ಯೂನಿಯರ್ ಚಿರು!

junior chiru meghana sarja chiranjeevi sarja 3

ಮತ್ತೆ ಮಾತು ಮುಂದುವರಿಸಿದ ಮೇಘನಾ, ಚಿರು ಫೋಟೋ ಮುಂದೆ ಮಗ ಜೋರಾಗಿ ಕಿರುಚುತ್ತಾನೆ. ನನಗೆ ತುಂಬಾ ಹೆಮ್ಮೆಯ ವಿಷಯವೆಂದರೆ ಕೇವಲ 6 ತಿಂಗಳಲ್ಲೇ ಮಗ ಅಪ್ಪನನ್ನು ಗುರುತಿಸುತ್ತಾನೆ. ಇವನೇ ನನ್ನ ಅಪ್ಪ ಎಂದು ಅರ್ಥಮಾಡಿಕೊಂಡಿದ್ದಾನೆ. ಇದು ನನಗೆ ತುಂಬಾ ಖುಷಿ ನೀಡಿದೆ ಎಂದು ಗದ್ಗದಿತರಾದರು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

Junior Chiru Meghana Raj Chiranjeevi 2

2021ರ ಮೇ 2ರಂದು ಮೇಘನಾ ಅವರು ತಮ್ಮ ಮಗನ ವೀಡಿಯೋವೊಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಜ್ಯೂನಿಯರ್ ಚಿರು ತನ್ನ ತಂದೆಯನ್ನು ಗುರುತು ಹಿಡಿಯುತ್ತಿರುವುದನ್ನು ಕಾಣಬಹುದಾಗಿದೆ. ಮೇಘನಾ ವೀಡಿಯೋ ಅಪ್ಲೋಡ್ ಮಾಡುತ್ತಿದ್ದಂತೆಯೇ ಚಿರು ಅಭಿಮಾನಿಗಳು ಶೇರ್ ಮಾಡಿಕೊಂಡು ತಮ್ಮದೇ ರೀತಿಯಲ್ಲಿ ಅಭಿಮಾನ ಮೆರೆದಿದ್ದರು. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

junior chiru meghana sarja chiranjeevi sarja 1

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ 2020ರ ಜೂನ್ 7ರಂದು ನಿಧನರಾಗಿದ್ದಾರೆ. ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಕುಟುಂಬ ಮಾತ್ರವಲ್ಲದೇ ಅವರ ಅಭಿಮಾನಿ ಬಳಗವೇ ಕಣ್ಣೀರು ಹಾಕಿತ್ತು. ಇಂದು ಮೊದಲ ವರ್ಷದ ಪುಣ್ಯತಿಥಿಯಾಗಿದ್ದು, ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಇತ್ತ ಅಭಿಮಾನಿಗಳು, ಚಿರು ಅಣ್ಣ ಪ್ರೀತಿಯಲ್ಲಿ ಗುಣವಂತ, ನಗುವಿನಲ್ಲಿ ಶ್ರೀಮಂತ ಅಭಿಮಾನಿಗಳ ಮನಸ್ಸಲ್ಲಿ ಎಂದಿಗೂ ಜೀವಂತ ಮಿಸ್ ಯು ಚಿರು ಅಣ್ಣ ಎಂದೆಲ್ಲಾ ಮೇಘನಾ ಶೇರ್ ಮಾಡಿರುವ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ನಮ್ಮ ನೋವು ದೂರ ಮಾಡಲು ಮಗು ರೂಪದಲ್ಲಿ ಚಿರು ಬಂದಿದ್ದಾನೆ – ಅರ್ಜುನ್ ಸರ್ಜಾ

 

View this post on Instagram

 

A post shared by Meghana Raj Sarja (@megsraj)

Share This Article
Leave a Comment

Leave a Reply

Your email address will not be published. Required fields are marked *