ಶುರುವಾಯ್ತೊಂದು ಹೊಸ ಹಾದಿ – ಪಪ್ಪಿ ತೋರಿಸಿದ ರಕ್ಷಿತ್ ಶೆಟ್ಟಿ

Public TV
3 Min Read
CHARLIE

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಅಭಿಮಾನಿಗಳಿಗಾಗಿ 777 ಚಾರ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

CHARLIe

ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮನುಷ್ಯ ಮತ್ತು ಶ್ವಾನದ ನಡುವೆ ಇರುವ ಒಂದು ಎಮೋಷನಲ್ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಈ ಸಿನಿಮಾದ ಮೊದಲ ಟೀಸರ್ ರೀಲಿಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

ಅಭಿಮಾನಿಗಳು ಏನನ್ನು ಊಹಿಸುತ್ತಾರೋ ಅದಕ್ಕಿಂತಲೂ ಭಿನ್ನವಾಗಿಯೇ ರಕ್ಷಿತ್ ಶೆಟ್ಟಿ ಅವರು ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಇವರು ನಟಿಸಿರು ಈ ಹಿಂದಿನ ಹಲವು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಬೇರೆಯದ್ದೇ ರೀತಿಯಲ್ಲಿ ಕಮಾಲ್ ಮಾಡಲಿದ್ದಾರೆ ಎನ್ನುವುದ ಟೀಸರ್ ನೀಡಿದವರಿ ಏನ್ನಿಸುತ್ತದೆ. ಶ್ವಾನ ಸಿನಿಮಾದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ ಟೀಸರ್‍ನಲ್ಲಿ ಪೂರ್ತಿಯಾಗಿ ಮುದ್ದಾದ ಶ್ವಾನವೇ ಕಾಣಿಸಿಕೊಂಡಿದೆ.

ಶ್ವಾನವು ಮಾಡುವ ತಂಟೆ, ತರ್ಲೆ, ತುಂಟಾ, ಕಷ್ಟ, ನೋವು, ಮುಗ್ದತೆ ಅದರ ಜೀವನ ಶೈಲಿ ಹೇಳಿರುತ್ತದೆ ಎಂಬುದನ್ನು ನಾವು ಟೀಸರ್‍ನಲ್ಲಿ ನೋಡಬಹುದಾಗಿದೆ. ಟೀಸರ್ ಕೊನೆಯಲ್ಲಿ ರಕ್ಷಿತ್ ಶೆಟ್ಟಿಯವರು ಕಾಣಿಸಿಕೊಳ್ಳುತ್ತಾರೆ ಅವರ ಕೈಯಲ್ಲಿ ನಾವು ಶ್ವಾನ ಇರುವುದನ್ನು ಗಮನಿಸ ಬಹುದಾಗಿದೆ. ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಟೀಸರ್ ನೋಡಿರುವವರಿಗೆ ಒಂದು ಕ್ಯೂರ್ಯಾಸಿಟಿ ಹುಟ್ಟುವುದಂತು ಖಂಡಿತಾ ಹೌದು. ಯಾಕೆ ಎಂದರೆ ಶ್ವಾನವನ್ನು ಇಟ್ಟುಕೊಂಡು ರಕ್ಷಿತ್ ಶೆಟ್ಟಿವರು ಏನು ಹೇಳಲು ಹೊರಟ್ಟಿದ್ದಾರೆ ಎನ್ನುವುನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿರುವುದು ಖಂಡಿತಾ ಹೌದು.

ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ 777 ಚಾರ್ಲಿ ಟೀಸರ್ ರಿಲೀಸ್ ಮಾಡಿದ್ದಾರೆ. ತಮಿಳಿನಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮಲೆಯಾಳಂನಲ್ಲಿ ಪೃಥ್ವಿರಾಜ್ ಟೀಸರ್ ರಿಲೀಸ್ ಮಾಡಿದ್ದಾರೆ. ಹಿಂದಿ ಮತ್ತು ಕನ್ನಡ ಟೀಸರ್‍ಗಳು ಪರಮ್‍ವಾ ಸ್ಟುಡಿಯೋ ಮೂಲಕ ರಿಲೀಸ್ ಆಗಿದೆ.

777 ಚಾರ್ಲಿ ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಟ್ ಮೊದಲಾದವರು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಟೀಸರ್ ನೋಡಿದ ಹಲವು ಸ್ಟಾರ್‍ಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸುಂದರವಾಗಿದೆ ಹೃದಯಸ್ಪರ್ಶಿ ಪ್ರಯತ್ನ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಸಿಂಪಲ್ ಸ್ಟಾರ್ ಆಗಿದ್ದರೂ ಕೂಡ ಸಿನಿಮಾ ಆಯ್ಕೆಗಳ ವಿಚಾರದಲ್ಲಿ ತಾವು ಸ್ಪೆಷಲ್ ಎಂಬುದನ್ನು ರಕ್ಷಿತ್ ಶೆಟ್ಟಿ ಸಾಬೀತು ಮಾಡುತ್ತಲೇ ಬಂದಿದ್ದಾರೆ. ಇಂದು ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *