ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

Public TV
2 Min Read
venkaiah naidu

ನವದೆಹಲಿ: ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಎದುರಿಗೆ ಬ್ಲೂ ಬ್ಯಾಡ್ಜ್ ಅಥವಾ ಟಿಕ್ ಮಾರ್ಕ್ ಬರುತ್ತದೆ. ನೀಲಿ ಬಣ್ಣದ ಟಿಕ್ ಮಾರ್ಕ್ ಇದ್ದರೆ ಸಂಬಂಧಪಟ್ಟವರ ಅಧಿಕೃತ ಟ್ವಿಟ್ಟರ್ ಖಾತೆ ಎಂದರ್ಥವಾಗುತ್ತದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕೃತ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯವಾಗಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಪುನಃ ಬ್ಲೂ ಟಿಕ್ ಮಾರ್ಕ್ ಹಾಕಲಾಗಿದೆ.

ವೆಂಕಯ್ಯ ನಾಯ್ಡು ಅವರ ಹೆಸರಲ್ಲಿ ಹಲವು ಖಾತೆಗಳು ಇರುವ ಕಾರಣ, ಅಧಿಕೃತ ಖಾತೆಯೆ ಬಗ್ಗೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಈ ದೃಢೀಕರಣ ಬ್ಯಾಡ್ಜ್‍ನ್ನು ನೀಡಲಾಗುತ್ತದೆ. ಆದರೆ ಸದ್ಯ ಎಂ.ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆ (@MVenkaiahNaidu)ಗೆ ನೀಡಲಾಗಿದ್ದ ಈ ಬ್ಲ್ಯೂಟಿಕ್ ತೆಗೆದು ಹಾಕಲ್ಪಟ್ಟಿತ್ತು. ಆದರೆ ಅವರ ಕಚೇರಿಯ ಟ್ವಿಟರ್ ಖಾತೆ (@VPSecretariat)ದ ಬ್ಲ್ಯೂಟಿಕ್ ಇನ್ನೂ ಹಾಗೇ ಉಳಿಸಿತ್ತು.  ಇದನ್ನೂ ಓದಿ:  ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

dhyjk medium

ಕಾರಣವೇನು?
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ದೃಢೀಕರಣ ಬ್ಯಾಡ್ಜ್ ತೆಗೆದುಹಾಕಲ್ಪಟ್ಟಿದ್ದಕ್ಕೆ ಉಪರಾಷ್ಟ್ರಪತಿ ಕಚೇರಿ ಸ್ಪಷ್ಟೀಕರಣ ನೀಡಿದೆ. ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆ ಕಳೆದ ಆರು ತಿಂಗಳಿಂದಲೂ ನಿಷ್ಕ್ರಿಯವಾಗಿತ್ತು. ಅಲ್ಲಿಂದ ಯಾವುದೇ ಟ್ವೀಟ್‍ಗಳನ್ನೂ ಮಾಡಲಾಗಿಲ್ಲ. ಹಾಗಾಗಿ ಬ್ಲ್ಯೂಟಿಕ್ ತೆಗೆಯಲ್ಪಟ್ಟಿದೆ ಎಂದು ತಿಳಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಬಳಿಕ ಟ್ವಿಟರ್ ಬ್ಲ್ಯೂಟಿಕ್ ವಾಪಸ್ ಕೊಟ್ಟಿದೆ ಎಂದೂ ಮಾಹಿತಿ ನೀಡಿದೆ.

dfhgjk medium

ಟ್ವಿಟರ್ ಬ್ಲ್ಯೂಟಿಕ್ ದೃಢೀಕರಣ ಬ್ಯಾಡ್ಜ್ ನೀಡಿದ ಬಳಿಕ ಆ ಅಕೌಂಟ್ ಸಂಪೂರ್ಣವಾಗಿ ಬಳಕೆಯಾಗುತ್ತಿರಬೇಕು ಅಂದರೆ ಸಕ್ರಿಯವಾಗಿರಬೇಕು. ಅದಿಲ್ಲದಿದ್ದರೆ ಅದನ್ನು ತೆಗೆಯುತ್ತದೆ. ಇನ್ನು ಬ್ಲ್ಯೂಟಿಕ್ ಪಡೆದ ಯಾರಾರೂ ಯೂಸರ್ ನೇಮ್ (ಬಳಕೆದಾರರು ಹೆಸರು) ಬದಲಿಸಿಕೊಂಡರೆ, ಆ ಕ್ಷಣಕ್ಕೆ ಟ್ವಿಟರ್ ಬ್ಲ್ಯೂಟಿಕ್ ತೆಗೆದುಹಾಕುತ್ತದೆ.

ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಅಥವಾ ಟ್ವಿಟ್ಟರ್ ನಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುವುದು ಸೇರಿದಂತೆ ಟ್ವಿಟರ್ ನಿಯಮಗಳ ತೀವ್ರ ಅಥವಾ ಪುನರಾವರ್ತಿತ ಉಲ್ಲಂಘನೆಯಲ್ಲಿ ಕಂಡುಬರುವ ಖಾತೆಗಳಿಂದ ಟ್ವಿಟರ್ ನೀಲಿ ಪರಿಶೀಲಿಸಿದ ಮಾರ್ಕ್ ನ್ನು ತೆಗೆದುಹಾಕಬಹುದು. ದ್ವೇಷಪೂರಿತ ನಡವಳಿಕೆ ನೀತಿ, ನಿಂದನೀಯ ನಡವಳಿಕೆ, ಹಿಂಸಾಚಾರ ನೀತಿಯ ವೈಭವೀಕರಣ, ನಾಗರಿಕ ಸಮಗ್ರತೆ ನೀತಿ, ಖಾಸಗಿ ಮಾಹಿತಿ ನೀತಿಯಲ್ಲಿ ಕೂಡ ಉಲ್ಲಂಘನೆ ಕಂಡುಬಂದರೆ ಸಂಸ್ಥೆ ಈ ಕ್ರಮ ಕೈಗೊಳ್ಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *