ಬೆಂಗಳೂರು: ಬ್ಲ್ಯಾಕ್ ಫಂಗಸ್ ಔಷಧಿ ಕಳವು ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ದಿನಗಳ ಹಿಂದೆ ಅಂದರೆ ಭಾನುವಾರ ಕಳ್ಳತನ ನಡೆದಿದೆ. ಭಾನುವಾರ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆ ಮಧ್ಯದಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ.
ಘಟನೆಯ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯ ಆರ್.ಎಂ.ಓ ಡಾಕ್ಟರ್ ಶ್ರೀನಿವಾಸ್ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಏಳನೇ ಪ್ಲೋರ್ ನಾ ಬ್ಲ್ಯಾಕ್ ಫಂಗಸ್ ವಾರ್ಡ್ ನಲ್ಲಿ ಘಟನೆ ನಡೆದಿದೆ ಅಂತಾ ಹೇಳಿದ್ದಾರೆ. ಬ್ಲ್ಯಾಕ್ ಫಂಗಸ್ ವಾರ್ಡ್ ಕಬೋರ್ಡ್ ನಲ್ಲಿ ಒಟ್ಟು 60 ವೈಯಲ್ ಬ್ಲ್ಯಾಕ್ ಫಂಗಸ್ ಔಷಧಿ ಇತ್ತು. ಅದರಲ್ಲಿ 10 ವೈಯಲ್ ಕಳ್ಳತನ ಮಾಡಿದ್ದಾರೆ.
ಈಗಾಗಲೇ ಪೊಲೀಸ್ ತನಿಖೆ ಶುರು ಮಾಡಿದ್ದು, 60 ವೈಯಲ್ ನಲ್ಲಿ 10 ವೈಯಲ್ ಮಾತ್ರ ಎತ್ತಿದ್ದಾರೆ. ಯಾರೇ ಆದರೂ ಸರಿ, ಡಾಕ್ಟರ್ ಆದರೂ ಸರಿ ಅವರನ್ನ ಒಳಗಡೆ ಹಾಕಬೇಕು ಎಂದು ಡಾ.ಶ್ರೀನಿವಾಸ್ ಆಗ್ರಹಿಸಿದ್ದಾರೆ.