ಗದಗ ಜಿಲ್ಲಾಡಳಿತದಿಂದ ಮುಂಚೂಣಿ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್, ಕಿಟ್ ವಿತರಣೆ

Public TV
2 Min Read
dadaga mask vitarane

ಗದಗ: ಜಿಲ್ಲಾಡಳಿತಕ್ಕೆ ದಾನಿಗಳು ನೆರವು ನೀಡಿದ ಮಾಸ್ಕ್, ಸ್ಯಾನಿಟೈಸರ್, ಫೇಸ್‍ಶೀಲ್ಡ್ ಹಾಗೂ ದಿನಸಿ ಕಿಟ್‍ಗಳನ್ನು ಆರೋಗ್ಯ ಇಲಾಖೆ ಸೇರಿದಂತೆ ಮುಂಚೂಣಿ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ವಿತರಿಸಲಾಯಿತು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ನೇತೃತ್ವದಲ್ಲಿ ವಿತರಿಸಲಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಸುಂದರೇಶ್ ಬಾಬು ಮಾತನಾಡಿ, ಆರೋಗ್ಯ ಇಲಾಖೆ ಸೇರಿದಂತೆ ಸೋಂಕು ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ, ಹೋಮ್ ಗಾರ್ಡ್, ಮಹಿಳಾ ಮಕ್ಕಳ ಇಲಾಖೆ, ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್, ತಾಲೂಕಾ ಆಡಳಿತಗಳು ಮುಂಚೂಣಿ ಸೇನಾನಿಗಳಾಗಿ ಶ್ರಮಿಸುತ್ತಿವೆ. ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

dadaga mask vitarane2 medium

ಅಧಿಕಾರಿಗಳು, ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಆಹಾರ ಸಾಮಗ್ರಿಗಳನ್ನು ನೀಡಲು ಇಲಾಖೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತಕ್ಕೆ ದಾನಿಗಳ ಮುಖಾಂತರ ನೀಡಲಾದ ಕಿಟ್‍ಗಳನ್ನು ಹೆಚ್ಚುವರಿಯಾಗಿ ಇಂದು ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸುರಕ್ಷತಾ ಕ್ರಮವಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲು ಅವಕಾಶ ನೀಡಲಾಗಿದ್ದು ಲಸಿಕೆ ಪಡೆಯದವರು ಲಸಿಕೆ ಪಡೆಯಬೇಕು. ಎಲ್ಲರೂ ಸೋಂಕು ಹರಡುವಿಕೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಇತರರಿಗೂ ಪಾಲಿಸಲು ತಿಳಿಸಬೇಕು ಎಂದರು. ಇದನ್ನೂ ಓದಿ:  ಪತ್ನಿಯನ್ನು ಕೊಂದ ಆರೋಪದ ಮೇಲೆ ಯೂಟ್ಯೂಬರ್ ಬಂಧನ

dadaga mask vitarane4 medium
ಜಿಲ್ಲಾಡಳಿತದಿಂದ ಪೊಲೀಸ್ ಇಲಾಖೆಗೆ 3 ಸಾವಿರ ಮಾಸ್ಕ್ , 30 ಲೀಟರ್ ಸ್ಯಾನಿಟೈಸರ್, ಗೃಹ ರಕ್ಷಕ ಇಲಾಖೆಗೆ 2 ಸಾವಿರ ಮಾಸ್ಕ್ , 5 ಲೀಟರ್ ಸ್ಯಾನಿಟೈಜರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 5 ಸಾವಿರ ಮಾಸ್ಕ್ , 25 ಲೀಟರ್ ಸ್ಯಾನಿಟೈಸರ್, ನಗರಸಭೆ ಗೆ 3 ಸಾವಿರ ಮಾಸ್ಕ್ , 5 ಲೀಟರ್ ಸ್ಯಾನಿಟೈಸರ್, ಜಿಲ್ಲಾ ಪಂಚಾಯತ್ ಗೆ 3 ಸಾವಿರ ಮಾಸ್ಕ್ , 30 ಲೀಟರ್ ಸ್ಯಾನಿಟೈಸರ್, ಆರೋಗ್ಯ ಇಲಾಖೆಗೆ 1 ಸಾವಿರ ಮಾಸ್ಕ್ , 25 ಲೀಟರ್ ಸ್ಯಾನಿಟೈಸರ್ , ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ ಕಚೇರಿಗಳಿಗೆ 3 ಸಾವಿರ ಮಾಸ್ಕ್ , 30 ಲೀಟರ್ ಸ್ಯಾನಿಟೈಸರ್ ಸೇರಿದಂತೆ ಫೇಸ್ ಶೀಲ್ಡ್, ದಿನಸಿ ಕಿಟ್ ವಿತರಣೆ ಮಾಡಲಾಯಿತು.

dadaga mask vitarane8 medium
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *