ರಾಯಚೂರು: ಕೊರೊನಾ ಸೋಂಕು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಹರಡಿದ್ದು ಹಳ್ಳಿಗಳ ಜನ ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ದೇವದುರ್ಗ ತಾಲೂಕಿನ ಹೆಗ್ಗಡದಿನ್ನಿಯ ಗ್ರಾಮಸ್ಥರು ದೇವರ ಮೊರೆ ಹೋಗಿದ್ದು, ಗ್ರಾಮದ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಯನ್ನ ಹಮ್ಮಿಕೊಂಡಿದ್ದಾರೆ.
16 ದಿನಗಳ ಕಾಲ ಗ್ರಾಮದ ಮಾರುತೇಶ್ವರ ದೇವರಿಗೆ ರುದ್ರಾಭಿಷೇಕ, ಊರ ಬುಡ್ಡೆ ಕಲ್ಲಿಗೆ ರುದ್ರಾಭಿಷೇಕ, ನಂದಾ ದೀಪ ಮಾರೆಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ವಿಶೇಷ ಪೂಜೆ ನಡೆಯುತ್ತಿದೆ. ಒಂದೊಂದು ದಿನ ಒಂದೊಂದು ಕುಟುಂಬದವರು ಪೂಜೆ ,ಅಭಿಷೇಕ ಸಲ್ಲಿಸುತ್ತಿದ್ದು. ಉಳಿದ ಜನ ಅವರ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರಿಗೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಗ್ರಾಮದಲ್ಲಿ ಎಂಟಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಎರಡು ಸಾವು ಸಂಭವಿಸಿವೆ. ಹೀಗಾಗಿ ಆತಂಕದಲ್ಲಿರುವ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ. ಜಿಲ್ಲೆಯಲ್ಲಿ 77 ಹಳ್ಳಿಗಳು ಮಾತ್ರ ಕೊರೊನಾ ಮುಕ್ತ ಗ್ರಾಮಗಳಾಗಿದ್ದು, 776 ಗ್ರಾಮಗಳು ಕೊರೊನಾ ಸೊಂಕಿಗೆ ಒಳಗಾಗಿವೆ.