ಬೆಂಗಳೂರು: ಸ್ಯಾಂಡಲ್‍ವುಡ್ ನಟ ರವಿಚಂದ್ರನ್ ಅವರಿಗೆ ಇಂದು 59ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಪುತ್ರ ಮನೋರಂಜನ್ ಪ್ರೀತಿಯ ಅಪ್ಪನ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ಮನೋರಂಜನ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ದಿ ಒನ್ ಮ್ಯಾನ್ ಶೋ’ ಅನ್ನು ರೀಲ್ ಮತ್ತು ರಿಯಲ್‍ನಲ್ಲಿ ನೋಡುವ ಸೌಭಾಗ್ಯ ನಮ್ಮ ಆಶೀರ್ವಾದ. ನನ್ನ ಒನ್ ಆ್ಯಂಡ್ ಒನ್ಲಿ ಹೀರೋ. ಈ ಲವ್ ಯು ಅಪ್ಪ ಎಂದು ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.
It’s a true blessing to witness “The One Man Show” on reel & in real. My one & only hero in all senses. I love you Dad! Happy 60th. To his craziness & all that he is, Cheers! #HappyBirthday #Ravichandran #CrazyStar @1n1ly_VRC pic.twitter.com/s6YAHANlm5
— Manoranjan R (@ActorManoranjan) May 30, 2021
ನಿನ್ನೆ ಕ್ರೇಜಿಸ್ಟಾರ್ ರವಿಚಂದ್ರನ್‍ರವರು ವೀಡಿಯೋವೊಂದನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದರು. ಈ ವೀಡಿಯೋದಲ್ಲಿ ರವಿಚಂದ್ರನ್‍ರವರು ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು, ಇದು ಕಾಲ್ಪನಿಕ ಕತೆಯಲ್ಲ, ನನ್ನಲಿರುವ ಸತ್ಯ, ಮನುಷ್ಯರು ಬಣ್ಣಗಳಾಗಿ, ಬಣ್ಣ ಬಣ್ಣದ ಭಾವನೆಗಳಾಗಿ, ಜೀವನಕ್ಕೆ ಎರಡು ಮುಖಗಳಿವೆ, ಪಾಪದ ಕತೆ, ಮೂರ್ಖತನ ಹಾಗೂ ವಾಸ್ತವ ಹೀಗೆ ಹಲವು ರೀತಿಯ ಸಾಲುಗಳು ವೀಡಿಯೋದಲ್ಲಿದೆ.
ಈ ವೀಡಿಯೋದ ಕೊನೆಯಲ್ಲಿ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಹಾಗೂ ರವಿ ಬೋಪಣ್ಣನವರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ರವಿ ಬೋಪಣ್ಣ ಸಿನಿಮಾ ಕುರಿತದ್ದೋ ಅಥವಾ ರವಿಚಂದ್ರನ್ ಜೀವನ ಕುರಿತು ಮಾಡುತ್ತಿರುವ ಸಿನಿಮಾವೋ ಎಂಬ ಗೋಂದಲ ಅಭಿಮಾನಿಗಳಲ್ಲಿ ಮೂಡಿಸುತ್ತಿದೆ. ಇದನ್ನು ಓದಿ: ಶಿವರಾಜ್‍ಕುಮಾರ್ ಬಳಿ ಸಹಾಯಕ್ಕೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ