ಹೈದರಾವಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯವರು ತೆಲುಗಿನ ಖ್ಯಾತ ದಿವಂಗತ ನಟ ನಂದಮೂರಿ ತಾರಕ ರಾಮರಾವ್‍ರವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿಮಾಡಿದ್ದಾರೆ.
ತೆಲುಗು ಚಿತ್ರರಂಗ ಬೆಳೆಸಲು ಪ್ರಮುಖ ಪಾತ್ರವಹಿಸಿದ ಎನ್‍ಟಿಆರ್‌ರವರಿಗೆ ಇಂದು 98ನೇ ವರ್ಷದ ಜನುಮ ದಿನ. ದಶಕಗಳ ಕಾಲ ಟಾಲಿವುಡ್‍ನಲ್ಲಿ ಮಿಂಚುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಎನ್‍ಟಿಆರ್‌ರವರು ಆಂಧ್ರ ಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಇಂದು ಮೆಗಾಸ್ಟಾರ್ ಚಿರಂಜೀವಿಯವರು ಎನ್‍ಟಿಆರ್‌ರವರ 98ನೇ ವರ್ಷದ ಹುಟ್ಟು ಹಬ್ಬದ ವಿಶೇಷ ದಿನದಂದು ಸ್ಮರಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಖ್ಯಾತ ಹಿನ್ನೆಲೆ ಗಾಯಕ ಭೂಪೆನ್ ಹಜಾರಿಕಾರಿಗೆ ಮರಣೋತ್ತರ ನಂತರ ದೇಶದತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿ ನೀಡಲಾಗಿತ್ತು. ಹಾಗೆಯೇ ತೆಲುಗು ರಾಜ್ಯದ ಹೆಮ್ಮೆಯ ನಾಯಕ ನಂದಮೂರಿ ತಾರಕ್ ರಾಮರಾವ್‍ಗೆ ಭಾರತ ರತ್ನ ಕೊಟ್ಟರೆ ಅದು ನಮ್ಮೆಲ್ಲರ ಹೆಮ್ಮೆ. ತಾರಕ್ ರಾಮ್‍ರಾವ್‍ರವರ 100ನೇ ಜನುಮದಿನದ ಸಂದರ್ಭದಲ್ಲಿ ಭಾರತ ರತ್ನ ಗೌರವ ನೀಡಿದರೆ, ಅದು ತೆಲುಗು ಪ್ರಜೆಗಳನ್ನು ಗೌರವಿಸದಂತೆ ಎಂದು ಟ್ವೀಟ್ ಮಾಡಿದ್ದಾರೆ.
#RememberingTheLegend#BharatRatnaForNTR pic.twitter.com/efN2BIl8w7
— Chiranjeevi Konidela (@KChiruTweets) May 28, 2021
ದಿವಂಗತ ನಟ ನಂದಮೂರಿ ತಾರಕ ರಾಮರಾವ್‍ರವರ ಹುಟ್ಟುಹಬ್ಬದ ಪ್ರಯುಕ್ತ ಸಿನಿ ತಾರೆಯರು ಹಾಗೂ ಅಭಿಮನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.