ಚಿಕ್ಕೋಡಿ: ಕೊರೊನಾ ಲಾಕ್‍ಡೌನ್ ನಡುವೆ ಸೆಕ್ಯುರಿಟಿ ಕೈ ಕಾಲು ಕಟ್ಟಿ ಸಾರಾಯಿ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ರಾತ್ರಿ ಬಂದು ಸೆಕ್ಯೂರಿಟಿ ಬಳಿ ಸಾರಾಯಿ ಕೇಳಿದ್ದಾರೆ. ಮದ್ಯವನ್ನು ನೀಡದ ಕಾರಣ ಸಾರಾಯಿ ಅಂಗಡಿಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸೆಕ್ಯೂರಿಟಿ ಕೈ ಕಾಲು ಕಟ್ಟಿಹಾಕಿ 4.5 ಲಕ್ಷ ರೂ ಮೌಲ್ಯದ ಸಾರಾಯಿ ಕದ್ದ ಖದೀಮರು ಎಸ್ಕೇಪ ಆಗಿದ್ದಾರೆ.
ತಡರಾತ್ರಿ 1 ಗಂಟೆಗೆ ಅಥಣಿಯ ವೆಂಕಟೇಶ್ವರ ವೈನ್ ಶಾಪ್‍ಗೆ ಬಂದ ಖದೀಮರ ಕೈಚಳಕ ತೋರಿದ್ದಾರೆ. ಕಾರಿನಲ್ಲಿ ಬಂದ 6 ಮಂದಿ ನಾಲ್ಕುವರೆ ಲಕ್ಷ ಮೌಲ್ಯದ ಮಧ್ಯ ಕಳ್ಳತನ ಮಾಡಿ ಸೆಕ್ಯೂರಿಟಿ ಗಾರ್ಡ್‍ಗೆ ಜೀವ ಬೆದರಿಕೆ ಹಾಕಿದ್ದಾರೆ. ಘಟನೆಯಿಂದ ಅಥಣಿ ವೈನ್ ಶಾಪ್ ಮಾಲೀಕರು ಬೆಚ್ಚಿ ಬಿದ್ದಿದ್ದು, ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.