ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ, ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಆಪ್ತ ಮಾಜಿ ಶಾಸಕ ನಾಗರಾಜು ಪ್ರತಿಕ್ರಿಯೆ ನೀಡಿದ್ದಾರೆ.
ಸಿಡಿಯಲ್ಲಿ ರಮೇಶ್ ಜಾರಕಿಹೊಳೆ ನಾನೇ ಎಂದು ಒಪ್ಪಿಕೊಂಡ ಎನ್ನಲಾದ ವಿಚಾರದ ಹಿನ್ನೆಲೆ, ಅದರ ಬಗ್ಗೆ ನನಗೆ ಗೊತ್ತಿಲ್ಲ ಅಂತಿದ್ರು ಕೂಲಂಕಷವಾಗಿ ತಿಳಿದು ತಿಳಿಸುವೆ. ಇವತ್ತು ಅವರು ಅಲ್ಲ ಅಂತ ಹೇಳುವೆ, ಅವರು ಏನು ಪರ್ಸನಲ್ ಆಗಿ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ರಾಜಕೀಯವಾಗಿ ನಾನು ಹತ್ತಿರವಿದ್ದೆ ಈ ವಿಚಾರದಲ್ಲಿ ನನಗೆ ಗೊತ್ತಿಲ್ಲ. ಅವರನ್ನು
ಬಿಜೆಪಿಗೆ ಕರೆತಂದಿದ್ದು ನಾನೇ. ಆದ್ರೆ ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ರಾಜಕೀಯವಾಗಿ ಇರಬೇಕಾದ್ರೆ ವಾಸ್ತವಾಂಶ ಒಪ್ಪಿಕೊಂಡಿರಬೇಕು ಎಂದು ಹೇಳಿದರು.
ಅವರ ಪರ್ಸನಲ್ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ, ನಾಲ್ಕೂವರೆ ತಿಂಗಳ ಹಿಂದೆ ಸಿಡಿ ಬಗ್ಗೆ ಗೊತ್ತಿತ್ತು. ಅಂದು ಕೇಳಿದ್ರೆ ಇಲ್ಲ ಅಂದ್ರು. ಆ ರೀತಿಯ ಕೆಟ್ಟ ಕೆಲಸ ಮಾಡಿಲ್ಲ. ಉದ್ದೇಶಪೂರ್ವಕವಾಗಿ ರಾಜಕೀಯ ಷಡ್ಯಂತ್ರದಿಂದ ಮಾಡಿದ್ದಾರೆ. ಅವರು ಸೇಫ್ ಆಗಲು ಆ ರೀತಿಯಲ್ಲಿ ಹೇಳಿರಬಹುದು ಎಂದು ತಿಳಿಸಿದರು.
ಯುವತಿ ನನಗೆ ಗೊತ್ತೆ ಇಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಆ ಯುವತಿ ನನಗೆ ಗೊತ್ತು ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಆ ಯುವತಿ ಪ್ರಾಜೆಕ್ಟ್ ವಿಚಾರದಲ್ಲಿ ನನಗೆ ಪರಿಚಯ ಆಗಿದ್ದು ನಿಜ. ಅವಾಗಾವಾಗ ನಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬರುತ್ತಿದ್ದಳು. ಅವಾಗ ಇಬ್ಬರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದೀವಿ. ಅದು ಕೂಡ ಆಕೆಯ ಸಮ್ಮತಿಯ ಮೇರೆಗೆ ಎಂದು ಎಸ್‍ಐಟಿ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವಿಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಅನ್ನೋ ಮಾಹಿತಿ ಬೆಳಕಿಗೆ ಬಂದಿದೆ.
ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಯಾವುದೇ ಬೆಳವಣಿಗೆಯೂ ನಡೆದಿಲ್ಲ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಅಂತ ಈ ಸುದ್ದಿಗೆ ಎಸ್‍ಐಟಿ ಮೂಲಗಳು ಸ್ಪಷ್ಟಪಡಿಸಿವೆ.