ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ರಕ್ಷಣಾ ಸಾಮಗ್ರಿ ನೀಡದ್ದಕ್ಕೆ ಡಿಸಿಗೆ ಬಿ.ಸಿ.ಪಾಟೀಲ್ ಕ್ಲಾಸ್

Public TV
1 Min Read
hvr bc patil

ಹಾವೇರಿ: ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಸೂಕ್ತ ರಕ್ಷಣಾ ಸಾಮಗ್ರಿ ನೀಡದ್ದಕ್ಕೆ ಜಿಲ್ಲಾಧಿಕಾರಿ ವಿರುದ್ಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಗರಂ ಆಗಿ ಫೋನ್ ನಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

corona virus 1 2

ಜಿಲ್ಲೆಯ ಹಿರೆಕೇರೂರು ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಆಶಾ ಕಾರ್ಯಕರ್ತೆಯರು ಸಚಿವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದು, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಯಾವುದೇ ಸುರಕ್ಷತಾ ಸಾಮಗ್ರಿ ನೀಡಿಲ್ಲ. ಕಣ್ಣೀರು ಒರೆಸಿಕೊಳ್ಳುತ್ತ ಸಚಿವರೆದುರು ತಮ್ಮ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ವಿರುದ್ಧ ಗರಂ ಆಗಿ ದೂರವಾಣಿಯಲ್ಲಿ ಡಿಸಿಯನ್ನ ತರಾಟೆಗೆ ತೆಗೆದುಕೊಂಡು, ಆಶಾ ಕಾರ್ಯಕರ್ತೆಯರಿಗೆ ಒಂದು ಮಾಸ್ಕ್ ಕೊಟ್ಟಿಲ್ಲ, ಸ್ಯಾನಿಟೈಸರ್ ಇಲ್ಲ, ಏನು ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಏನ್ ವ್ಯವಸ್ಥೆ ನಡೆಯುತ್ತಿದೆ, ಇಲ್ಲದ ಕತೆಗಳನ್ನು ಹೇಳಬೇಡಿ, ನಾನು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಟಿಎಚ್‍ಓ ಕೇಳಿದರೆ ಕೊಟ್ಟಿಲ್ಲ ಅಂತಿದ್ದಾರೆ. ಎನ್‍ಡಿಆರ್ ಎಫ್, ಎಸ್ ಡಿಆರ್ ಎಫ್ ಫಂಡ್ ನಲ್ಲಿ ಮಾಸ್ಕ್ ಕೊಳ್ಳೋಕೆ ಏನಾಗಿದೆ ನಿಮಗೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಡಿಸಿ ಸರ್ ವಿತರಣೆ ಆಗಿದೆ ಎಂದು ಫೋನ್ ನಲ್ಲಿ ಸಬೂಬು ನೀಡಿದರು.

ASHA 1

ಬಳಿಕ ಸಚಿವರು ಕೆಂಡಾಮಂಡಲರಾಗಿ ಮತ್ತೆ ಕ್ಲಾಸ್ ತೆಗೆದುಕೊಂಡರು. ಆಶಾ ಕಾರ್ಯಕರ್ತರ ಜೊತೆ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತೀರಾ? ಅವರನ್ನೆ ಕೇಳ್ತೀರಾ ಎಂದು ಗರಂ ಆದರು. ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ಆಶಾಗಳು ಹಳ್ಳಿಗಳಲ್ಲಿ ಹೇಗೆ ಕೆಲಸ ಮಾಡಬೇಕು. ನಿಮ್ಮ ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಜನರು ಸಾಯುತ್ತಿದ್ದಾರೆ. ಇದು ಸಾಮಾನ್ಯ ವಿಚಾರವಲ್ಲ, ತುಂಬಾ ಗಂಭೀರವಾದ ವಿಚಾರ ಬೇಗ ಕೊಡುವ ವ್ಯವಸ್ಥೆ ಮಾಡಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *